

ಪಾವಗಡ: ತಾಲೂಕಿನ ಮಾಚರಾಜನಹಳ್ಳಿ ಹೊರವಲಯದ ನೀಲಗಿರಿ ಅರಣ್ಯದಲ್ಲಿ ಜೂ.20ರಂದು ಶವವಾಗಿ ಪತ್ತೆಯಾಗಿದ್ದ ಮಹಿಳೆಯ ಗುರುತು ಸಿಕ್ಕಿದೆ.
ಮಡಕಶಿರಾ ತಾಲೂಕಿನ ಎಲ್ಲೋಟಿಯ ಚಂದ್ರಕ್ಕ (55)ಎಂAಬುವವರನ್ನು ಆಕೆಯ ಮಗನೇ ಆಸ್ತಿಗಾಗಿ ಕತ್ತು ಕೂಯ್ದು ಕೊಲೆಗೈದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.
ಎಲ್ಲೋಟಿ ಗ್ರಾಮದ ಆಂಜನೇಯಲು(35) ಮತ್ತು ಇವನ ಬಾಮೈದ ಪಾವಗಡ ತಾಲೂಕಿನ ಸೂಲನಾಯಕನಹಳ್ಳಿ ಪ್ರಭಾಕರ(30) ಸೇರಿಕೊಂಡು ಚಂದ್ರಕ್ಕನನ್ನು ಕೊಲೈ ಮಾಡಿದ್ದಾರೆ.
ಕೊಲೆಯಾದ ಚಂದ್ರಕ್ಕನಿಗೆ ಐದು ಎಕರೆ ಕೃಷಿ ಜಮೀನು ಇದ್ದು ಅದನ್ನು ಅವರಿಗಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಬರೆದು ಕೊಡುತ್ತೇನೆಂದು ಹೇಳಿದ್ದರಿಂದ ಸಿಟ್ಟಾದ ಆಕೆಯ ಪುತ್ರ ಆಂಜನೇಯಲು ಕೊಲೆಗೈದಿದ್ದಾನೆ.
ಆರೋಪಿಗಳಿಬ್ಬರನ್ನು ಮಂಗಳವಾರ ಎಲ್ಲೋಟಿ ಗ್ರಾಮದಲ್ಲಿ ಬಂಧಿಸಲಾಗಿದ್ದು ಪಾವಗಡ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ.
ಕಳೆದ ಗುರುವಾರ ಮಾಚರಾಜನಹಳ್ಳಿಯ ನೀಲಗಿರಿ ಅರಣ್ಯ ಪ್ರದೇಶಕ್ಕೆ ಬೇವಿನ ಬೀಜ ಸಂಗ್ರಹಿಸಲು ಹೋಗಿದ್ದ ಚಂದ್ರಕ್ಕ ರಕ್ತದ ಮಡುವಿನಲ್ಲಿ ಬಿದ್ದಿ ಸಾವನ್ನಪ್ಪಿದ್ದರು. ಸ್ಥಳೀಯ ರೈತನೊಬ್ಬ ಮೃತದೇಹ ನೋಡಿ ಪೋಲಿಸರಿಗೆ ಮಾಹಿತಿ ನೀಡಿದ್ದರು.