ಆಟೋಗೆ, ಬಸ್ ಡಿಕ್ಕಿ11 ಕೂಲಿ ಕಾರ್ಮಿಕರಿಗೆ ಗಾಯ

DOMMATHAMARI PHOTO 02
Published on

ಪಾವಗಡ: ತಾಲ್ಲೂಕಿನ ಕಸಬಾ ಹೋಬಳಿ, ದೊಮ್ಮತಮರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಂದ್ರಗಡಿ ಎಲಗಣಗುಟ್ಟೆ ಸ್ಥಳದಲ್ಲಿ ಖಾಸಗಿ  ಬಸ್ಸೊಂದು ಕೂಲಿ ಕಾರ್ಮಿಕರಿರುವ ತ್ರಿಚಕ್ರ  ಆಟೋಗೆ ಡಿಕ್ಕಿ ಹೊಡೆದು 11 ಜನ ಕೂಲಿ ಕಾರ್ಮಿಕರಿಗೆ ತೀವ್ರವಾದ ಗಾಯಗಳಾಗಿವೆ.  ಅದೃಷ್ಟವಶಾತ್  ಯಾವುದೇ ರೀತಿಯ ಸಾವು  ಸಂಭವಿಸಿಲ್ಲ.

ರೊದ್ದಂ ಮಾರ್ಗವಾಗಿ ವೆಂಕಟಾಪುರ, ದೊಮ್ಮತಮರಿಯಿಂದ ಹಿಂದುಪುರಕ್ಕೆ  ಹೋಗುವ  ಎಸ್ ಎಲ್ ವಿ ಬಸ್ಸು   ಮುಂದಗಡೆ ಹೋಗುತ್ತಿರುವ  ತ್ರಿಚಕ್ರ ಆಟೋಗೆ ವೇಗವಾಗಿ ಬಂದ ಖಾಸಗಿ ಬಸ್ಸು ಆಯತಪ್ಪಿ ಹಿಂಬದಿಯಿಂದ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.

ದೊಮ್ಮತಮರಿ  ಮಹಿಳಾ ಕೂಲಿಗಾರರು ದಿನನಿತ್ಯ  ತಮ್ಮ ಕೂಲಿ ಕೆಲಸಕ್ಕಾಗಿ ಖಾಸಗಿ ತ್ರಿಚಕ್ರ ಆಟೊ ಬಾಡಿಗೆ ಮಾತನಾಡಿ  ಹೋಗುತ್ತಿರುವಾಗ ಬಸ್ಸೊಂದು ಕೂಲಿ ಕಾರ್ಮಿಕರಿರುವ ಆಟೋಗೆ ಡಿಕ್ಕಿ ಹೊಡೆದಿರುವ ಕಾರಣ 11 ಜನಕ್ಕೆ ತೀವ್ರವಾಗಿ ಗಾಯಗಳಾಗಿರುತ್ತದೆ. 

ಆಟೋ ಚಾಲಕ   ಗಿರಿ-35, ಕೂಲಿ ಕಾರ್ಮಿಕರಾದ  ಕಮಲಮ್ಮ-45, ನಾಗಮ್ಮ-30 ಈ ಮೂವರಿಗೂ ತಲೆಯ ಭಾಗಕ್ಕೆ ಹೆಚ್ಚಿನ ಗಾಯಗಳಾಗಿ  ಹೆಚ್ಚು ರಕ್ತಸ್ರಾವವಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗೆಂದು ತುಮಕೂರಿಗೆ ದಾಖಲಿಸಲಾಗಿದೆ.

ಇನ್ನುಳಿದ ಮಮತಾ -33, ರಂಗಮ್ಮ =32, ಪಾರ್ವತಮ್ಮ -55,ರಂಗಮ್ಮ -55, ಚೌಡಮ್ಮ -30, ಶ್ಯಾಮಲಾ  -28, ಭಾಗ್ಯಮ್ಮ  -35, ಮುತ್ಯಾಲಮ್ಮ -45, ಶೈಲಜಾ  -23, ಈ 8 ಜನ ಕೂಲಿ ಕಾರ್ಮಿಕರನ್ನು ಚಿಕಿತ್ಸೆಗೆಂದು ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಾವಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net