

ತುಮಕೂರು: ತುಮಕೂರು ಜಿಲ್ಲೆಯ ಕೊಬ್ಬರಿ ಬೆಳೆಗಾರರ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಮಣಿದಿದ್ದು ಕನಿಷ್ಟ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಗೆ ಪ್ರಾದೇಶಿಕವಾರು ಗರಿಷ್ಟ ಮಿತಿ ಜಾರಿಗೊಳಿಸಿದೆ.
ಕೇಂದ್ರ ಸರ್ಕಾರ ರಾಜ್ಯದಲ್ಲಿ 6,92,500 ಕ್ವಿಂಟಾಲ್ ಕೊಬ್ಬರಿ ಖರೀದಿ ಮಾಡಲು ಅನುಮತಿ ನೀಡಿದ್ದು ತುಮಕೂರು ಜಿಲ್ಲೆಯಿಂದ 3.50ಲಕ್ಷ ಕ್ವಿಂಟಾಲ್ ಕೊಬ್ಬರಿ ಖರೀದಿಗೆ ಅವಕಾಶ ನೀಡಿದ್ದು ಉಳಿದ ಆರು ಜಿಲ್ಲೆಗಿಂತ ಹೆಚ್ಚು ಖರೀದಿಯಾಗಲಿದೆ.
ತುಮಕೂರು ಜಿಲ್ಲೆಗೆ 3.50ಲಕ್ಷ ಕ್ವಿಂಟಾಲ್, ಹಾಸನ 1.75 ಲಕ್ಷ ಕ್ವಿಂಟಾಲ್, ಚಿಕ್ಕಮಗಳೂರು 55 ಸಾವಿರ, ಮಂಡ್ಯ, ಚಿತ್ರದುರ್ಗ ತಲಾ 40 ಸಾವಿರ, ರಾಮನಗರ 25 ಸಾವಿರ, ಮೈಸೂರು 5 ಸಾವಿರ, ದಕ್ಷಿಣ ಕನ್ನಡ 1 ಸಾವಿರ, ಚಾಮರಾಜನಗರ 1500ಕ್ವಿಂಟಾಲ್ ಮಿತಿಗೊಳಿಸಲಾಗಿದ್ದು ಅಕ್ರಮಕ್ಕೆ ಅವಕಾಶವಿಲ್ಲದಂತಾಗಿದೆ.