

ತುಮಕೂರು: ಹೊಸದಾಗಿ 400 ಪಿಎಸ್‌ಐ ಹುದ್ದೆ ನೇಮಕಾತಿಗೆ ಗೃಹ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆಯಾದರೂ ಈ ಹಿಂದಿನ ಪಿಎಸ್‌ಐ ನೇಮಕಾತಿ ಅಕ್ರಮ ಹೊಸ ನೇಮಕಾತಿಗೆ ಅಡ್ಡಿಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಹಗರಣ ಮುಕ್ತಾಯವಾಗುವವರೆಗೂ ಹೊಸ ನೇಮಕಾತಿ ಸಾಧ್ಯವಿಲ್ಲ. ತನಿಖೆ ಮುಕ್ತಾಯಗೊಂಡು ಸಮಸ್ಯೆ ಬಗೆಹರಿದ ಬಳಿಕವಷ್ಟೆ ಹೊಸ ನೇಮಕಾತಿ ಮಾಡಬೇಕಾಗಿದೆ ಎಂದರು.
ಹಗರಣ ತನಿಖೆ ಚುರುಕಾಗಿದ್ದು ಆದಷ್ಟು ಶೀಘ್ರವಾಗಿಯೇ ಇದನ್ನು ಬಗೆಹರಿಸುತ್ತೇವೆ, ಯಾವ ಅಭ್ಯರ್ಥಿಗಳೂ ಆತಂಕ ಪಡುವ ಅಗತ್ಯವಿಲ್ಲ ರಾಜ್ಯದಲ್ಲಿ ಒಟ್ಟು 1 ಸಾವಿರ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ ಎಂದರು.
ಹಗರಣದಿAದ ಬಹಳಷ್ಟು ಮಂದಿಗೆ ಅರ್ಹರಿಗೂ ತೊಂದರೆಯಾಗಿದೆ. ನೇಮಕಾತಿಯೂ ನಿಂತು ಹೋಗಿದೆ. ಎಲ್ಲವೂ ಸರಿ ಹೋಗಿದ್ದರೆ 545 ಪಿಎಸ್‌ಐ ನೇಮಕಾತಿಯಾಗಬೇಕಾಗಿತ್ತು ಎಂದರು.