

ತುಮಕೂರು: ಕಳ್ಳತನ ಪ್ರಕರಣವೊಂದರ ವಿಚಾರಣೆಗೆ ಕತೆತಂದಿದ್ದ ಆರೋಪಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಗುಬ್ಬಿ ಪೊಲೀಸ್ ಠಾಣೆ ಘಟನೆ ಹಿನ್ನೆಲೆಯಲ್ಲಿ ಪಿಎಸ್‌ಐ ದೇವಿಕಾ ಸೇರಿ ಐವರು ಪೊಲೀಸರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಆದೇಶಿಸಿದ್ದಾರೆ.
ಗುಬ್ಬಿ ಪೊಲೀಸ್ ಠಾಣೆ ಪಿಎಸ್‌ಐ ದೇವಿಕಾ, ಮೂವರು ಹೆಡ್‌ಕಾನ್ಸ್ಟೇಬಲ್ ಹಾಗೂ ಒಬ್ಬ ಕಾನ್ಸ್ಟೇಬಲ್ ಸೇರಿ ಐವರನ್ನು ಅಮಾನತುಗೊಳಿಸಿ ಶನಿವಾರ ಸಂಜೆ ಆದೇಶ ಹೊರಡಿಸಲಾಗಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಹುಲ್ಲೂರು ಗ್ರಾಮದಲ್ಲಿ ಡ್ಯಾನ್ಸ್ ಕೊರಿಯೋಗ್ರಾಪರ್ ಕೆಲಸ ಮಾಡುತ್ತಿದ್ದ ಸಯ್ಯದ್ ಅಲಿ ಬಾಳ ಸಾಹೇಬ್ ನದಾಫ್ ಶುಕ್ರವಾರ ಬೆಳಗಿನ ಜಾವ ಪೊಲೀಸ್ ಠಾಣೆಯಿಂದ ಎಸ್ಕೇಪ್ ಆಗಿರುವ ಪ್ರಕರಣ ಪೊಲೀಸ್ ಇಲಾಖೆಗೆ ಮುಜುಗರ ತಂದಿತ್ತು.
ಗುಬ್ಬಿ ತಾಲೂಕಿನಲ್ಲಿ ಸರ ಕಳ್ಳತನ ಮಾಡಿರುವ ಪ್ರಕರಣ ಸಂಬಂಧವಾಗಿ ಶಂಕಿತ ಆರೋಪಿ ಸಯ್ಯದ್ ಅಲಿ ಬಾಳ ಸಾಹೇಬ್ ನದಾಫ್‌ನನ್ನು ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು.