ಕೆ.ಎನ್​.ರಾಜಣ್ಣ ಅಮೃತ ಮಹೋತ್ಸವಕ್ಕೆ ಸಿದ್ಧತೆ

KNR
Published on

ತುಮಕೂರು: ಸಹಕಾರ ಸಚಿವ ಕೆ.ಎನ್​.ರಾಜಣ್ಣ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳು ತುಮಕೂರಿನಲ್ಲಿ ಜೂ.21ರಂದು ಬೃಹತ್​ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.

ಸಾವಿರಾರು ಜನರು ಭಾಗವಹಿಸಲಿರುವ ಕೆಎನ್​ಆರ್​ ಅಮೃತ ಮಹೋತ್ಸವದಲ್ಲಿ ರಾಜಣ್ಣ ಅವರು ನಡೆದುಬಂದ ಹೋರಾಟದ ಬದುಕಿನ ಬಗ್ಗೆ

ಚಿತ್ರಣವನ್ನು ಒಳಗೊಂಡ ಅಭಿನಂದನಾ ಗ್ರಂಥ ಬಿಡುಗಡೆಯಾಗಲಿದೆ. ನಗರದ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಸಿದ್ಧತೆ ನಡೆದಿರುವ ಸ್ಥಳದಲ್ಲಿ ವಿಧಾನ ಪರಿಷತ್​ ಸದಸ್ಯ ಆರ್​.ರಾಜೇಂದ್ರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ರೂಪುರೇಷದ ಬಗ್ಗೆ ತಿಳಿಸಿದರು.

ಜೂನ್​ 21ರಂದು ಬೆಳಗ್ಗೆ 10 ಗಂಟೆಗೆ ನಗರದ ಜ್ಯೂನಿಯರ್​ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಗೃಹಸಚಿವ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ಅಧ್ಯಕ್ಷತೆ ವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ಎಲ್ಲಾ ಪಕ್ಷದಲ್ಲಿರುವ ರಾಜಣ್ಣ ಅವರ ಒಡನಾಡಿಗಳು ಭಾಗವಹಿಸ ಬೃಹತ್​ ಕಾರ್ಯಕ್ರಮದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಆಶಯ ನುಡಿಗಳನ್ನಾಡುವರು ಎಂದರು.

ರಾಜ್ಯದ ನಾನಾ ಕಡೆಗಳಿಂದ ರಾಜಣ್ಣನವರ ಸ್ನೇಹಿತರು, ಹಿತೈಷಿಗಳು, ಸಹಕಾರ ಕ್ಷೇತ್ರದ ಗಣ್ಯರು ಆಗಮಿಸಲಿದ್ದು, ಇದು ಯಾವುದೇ ರಾಜಕೀಯ ಉದ್ದೇಶದಿಂದ ಆಯೋಜಿಸುತ್ತಿರುವ ಕಾರ್ಯಕ್ರಮವಲ್ಲ. ಜನ ಸ್ವಯಂ ಪ್ರೇರಿತರಾಗಿ ಬರಲಿದ್ದಾರೆ, ಇದು ರಾಜಣ್ಣ ಅವರ ಶಕ್ತಿ ಪ್ರದರ್ಶನ ಎಂದೂ ಯಾರೂ ಭಾವಿಸಬಾರದು ಎಂದರು.

ಅಭಿನಂದನಾ ಗ್ರಂಥ ರಾಜಣ್ಣನವರ ಬಾಲ್ಯ, ವಿದ್ಯಾಭ್ಯಾಸ, ಸಹಕಾರ ಕ್ಷೇತ್ರದ ಕೊಡುಗೆ, ರಾಜಕಾರಣ ಸೇರಿದಂತೆ ಅವರು ನಡೆದು ಬಂದ ಹಾದಿಯನ್ನು ಒಳಗೊಂಡಿರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿಯ ಕೆ.ಎ.ದೇವರಾಜು, ಟಿ.ಆರ್​.ಆಂಜಿನಪ್ಪ, ಬಾ.ಹ.ರಮಾಕುಮಾರಿ, ಎಂ.ಎಚ್​.ನಾಗರಾಜು, ಟಿ.ಪಿ.ಮಂಜುನಾಥ್​, ಲಕ್ಷಿ$್ಮನಾರಾಯಣ್​, ಗುರುಮೂರ್ತಿ, ಟಿ.ಮುರಳಿಕೃಷ್ಣಪ್ಪ, ಜಂಗಮಪ್ಪ, ಬಿ.ಸಿ.ಶೈಲಾ, ಪಿ.ಆರ್​.ನಾರಾಯಣಗೌಡ, ಎನ್​.ಗಂಗಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net