

ತುಮಕೂರು: ಬೆಸ್ಕಾಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ಪ್ರತ್ಯೇಕ ಕೃಷಿ ಫೀಡರ್ ನಿಮಾರ್ಣ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಏ.15, 17, 20, 22, 24, 25, 28ರಂದು ಗೋವಿಂದನಗರ, ಹೌಸಿಂಗ್ ಬೋರ್ಡ್, ಗುಬ್ಬಿಗೇಟ್, ಕುಂಟಮ್ಮನ ತೋಟ, ದಿಬ್ಬೂರು, ಬಿ.ಹೆಚ್.ಪಾಳ್ಯ, ಹೊನ್ನೇನಹಳ್ಳಿ ರಸ್ತೆ, ಹಾರೋನಹಳ್ಳಿ ಹಾಗೂ ಏಪ್ರಿಲ್ 11, 16, 19, 21, 23, 25, 27, 29ರಂದು ಹನುಮಂತಪುರ, ಕುವೆಂಪುನಗರ, ಆದರ್ಶನಗರ, ಅಣ್ಣೇತೋಟ, ಜಗನ್ನಾಥಪುರ ಶಾರದಾ ದೇವಿ ನಗರ, ಗಣೇಶ ನಗರ ನಿರ್ವಾಣಿ ಲೇಔಟ್ ಪ್ರದೇಶದಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.