

ತುಮಕೂರು: ಪವರ್ ಗ್ರಿಡ್ ಕಾಪೋರ್ರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ತಾತ್ಕಾಲಿಕವಾಗಿ 2 ವರ್ಷಗಳ ಅವಧಿಗಾಗಿ ನೇಮಕಾತಿ ಮಾಡಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಫೀಲ್ಡ್ ಇಂಜಿನಿಯರ್(ಎಲೆಕ್ಟ್ರಿಕಲ್), ಫೀಲ್ಡ್ ಇಂಜಿನಿಯರ್(ಸಿವಿಲ್), ಫೀಲ್ಡ್ ಸೂಪರ್ವೈಸರ್(ಎಲೆಕ್ಟ್ರಿಕಲ್) ಹಾಗೂ ಫೀಲ್ಡ್ ಸೂಪರ್ವೈಸರ್(ಸಿವಿಲ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದ್ದು, ಆಸಕ್ತ ಅಭ್ಯರ್ಥಿಗಳು ವೆಬ್ಸೈಟ್ ವಿಳಾಸ http://www.powergrid.in /careers ನಲ್ಲಿ ಭರ್ತಿ ಮಾಡಿ ಸೆ.27ರೊಳಗೆ ಸಲ್ಲಿಸಬಹುದು.
ಫೀಲ್ಡ್ ಇಂಜಿನಿಯರ್(ಎಲೆಕ್ಟ್ರಿಕಲ್) ಹುದ್ದೆಗಾಗಿ ಎಲೆಕ್ಟ್ರಿಕಲ್ ವಿಷಯದಲ್ಲಿ ಬಿಇ/ಬಿ.ಟೆಕ್/ಬಿಎಸ್ಸಿ(ಇಂಜಿನಿಯರಿಂಗ್), ಫೀಲ್ಡ್ ಇಂಜಿನಿಯರ್(ಸಿವಿಲ್) ಹುದ್ದೆಗಾಗಿ ಸಿವಿಲ್ ವಿಷಯದಲ್ಲಿ ಬಿಇ/ಬಿ.ಟೆಕ್/ಬಿಎಸ್ಸಿ(ಇಂಜಿನಿಯರಿಂಗ್), ಫೀಲ್ಡ್ ಸೂಪರ್ವೈಸರ್(ಎಲೆಕ್ಟ್ರಿಕಲ್) ಹುದ್ದೆಗಾಗಿ ಎಲೆಕ್ಟ್ರಿಕಲ್ ಡಿಪ್ಲೋಮಾ ಹಾಗೂ ಫೀಲ್ಡ್ ಸೂಪರ್ವೈಸರ್(ಸಿವಿಲ್) ಹುದ್ದೆಗಾಗಿ ಸಿವಿಲ್ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
ಮಾಹಿತಿಗೆ ಉದ್ಯೋಗ ವಿನಿಮಯ ಕಚೇರಿ ಅಥವಾ ದೂ. 0816 -2278488 ಸಂಪರ್ಕಿಸಿ.