

ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯಕಿಯ ತರಬೇತಿ ಕೇಂದ್ರದ ವತಿಯಿಂದ ರೈತರಿಗೆ ಆಧುನಿಕ ಕೋಳಿ ಸಾಕಾಣಿಕೆ ಕುರಿತು ಆಸಕ್ತ 30 ಮಂದಿ ರೈತರಿಗೆ ಉಚಿತ ತರಬೇತಿ ನೀಡಲಾಗುತ್ತಿದೆ.
ತರಬೇತಿ ಜುಲೈ 21 ಮತ್ತು 22ರಂದು ನಗರದ ಕುಣಿಗಲ್ ರಸ್ತೆ ಕಾಲ್ಟೆಕ್ಸ್ ವೃತ್ತದ ಬಳಿಯಿರುವ ಪಶುವೈದ್ಯಕಿಯ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ತರಬೇತಿಗೆ ಹಾಜರಾಗಲು ಇಚ್ಛಿಸುವವರು 2 ಪಾಸ್ಪೋರ್ಟ್ ಅಳತೆ ಭಾವಚಿತ್ರ, ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ(ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದಲ್ಲಿ)ವನ್ನು ಕಡ್ಡಾಯವಾಗಿ ತರಬೇಕು.