

ತುಮಕೂರು: ಸಾರ್ವಜನಿಕರು ಅಂಚೆ ಸೇವೆಗೆ ಸಂಬಂಧಿಸಿದಂತೆ ದೂರು, ಸಲಹೆ, ಸೂಚನೆಗಳನ್ನು ಸಲ್ಲಿಸಲು ಅನುವಾಗುವಂತೆ ಗಾಂಧಿನಗರದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಸೆ.30ರ ಬೆಳಗ್ಗೆ 11ಕ್ಕೆ ತುಮಕೂರು ವಿಭಾಗೀಯ ಮಟ್ಟದ ಅಂಚೆ ಅದಾಲತ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಾರ್ವಜನಿಕರು ಅಂಚೆ ಸೇವೆಗೆ ಸಂಬಂಧಿಸಿದಂತೆ ದೂರು, ಸಲಹೆ, ಸೂಚನೆಗಳಿದ್ದಲ್ಲಿ ಸೆ.29ರೊಳಗಾಗಿ ಅಂಚೆ ಅಧೀಕ್ಷಕ ಕೆ.ಆರ್.ಉಷಾಗೆ ಸಲ್ಲಿಸಬಹುದು.