ಯಾದವ ಸಮುದಾಯಕ್ಕೆ ಬಿಜೆಪಿ ನ್ಯಾಯ ನೀಡಿಲ್ಲ; ಮಾಜಿ ಶಾಸಕಿ ಪೂರ್ಣಿಮಾ

Poornima
Published on

ತುಮಕೂರು: ಹಿಂದುತ್ವ ಅನ್ನೋದು ಬಿಜೆಪಿ ಸೇರಿದಂತೆ ಯಾವುದೇ ಒಂದು ಪಕ್ಷಕ್ಕೆ ಸೀಮಿತ ಆಗಿರೋದಲ್ಲ, ಬಿಜೆಪಿಯಿಂದ ಪಾಲಿಕೆ ಸದಸ್ಯೆಯಾಗಿ, ಶಾಸಕಿಯಾಗಿದ್ದಾಗಲೂ ಹಿಂದೂತ್ವ ಅಜೆಂಡಾದಲ್ಲಿ ಕೆಲಸ ಮಾಡಿಲ್ಲ ಎಂದು ಹಿರಿಯೂರಯ ಮಾಜಿ ಶಾಸಕಿ ಪೂರ್ಣಿಮಾ ಹೇಳಿದರು.

ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿಯೊಬ್ಬರು ಕೂಡ ಹಿಂದೂಗಳಾಗಿ ಭಾರತೀಯ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದ್ದೇವೆ. ಹಿಂದುತ್ವ ಯಾವುದೊ ಒಂದು ಪಕ್ಷದ ಸ್ವತ್ತಲ್ಲ. ನಾನು ಶಾಸಕಿಯಾಗಿ ಆಯ್ಕೆಯಾಗಿದ್ದು ಕೂಡ ಹಿಂದುತ್ವ ಅಜೆಂಡಾದಿಂದಲ್ಲ ಎಂದರು.

ಬಿಜೆಪಿ ತೊರೆದು ಅಕ್ಟೋಬರ್ 20ರಂದು ಕಾಂಗ್ರೆಸ್ ಪಕ್ಷಕ್ಕೆ ವಾಪಸಾಗುತ್ತಿದ್ದೇನೆ, ಚುನಾವಣೆಗೆ ಪೂರ್ವದಲ್ಲಿಯೇ ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ಆಹ್ವಾನಿಸಿದ್ದರು ಆದರೆ, ಹಿರಿಯೂರಿನಿಂದ ಸ್ಫರ್ಧಿಸಬೇಕು ಎಂಬ ಕಾರಣಕ್ಕೆ ಬಿಜೆಪಿಯಲ್ಲಿಯೇ ಉಳಿದಿದ್ದೆ. ಯಾದವ ಸಮುದಾಯಕ್ಕೆ ಬಿಜೆಪಿ ನ್ಯಾಯ ನೀಡಿಲ್ಲ ಎಂದು ಕಾಂಗ್ರೆಸ್‌ಗೆ ವಾಪಸಾಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net