

ತುಮಕೂರು: ಪ್ರಧಾನ ಮಂತ್ರಿ ಆತ್ಮ ನಿರ್ಭರ್ ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಿ, ಹಾಲು ಮಾರಾಟಗಾರರು ಹಾಗೂ ದಿನಪತ್ರಿಕೆ ವಿತರಕರುಗಳಿಗೆ ಕಿರು ಸಾಲ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವ್ಯಾಪಾರಿಗಳು 15 ದಿನಗಳೊಳಗಾಗಿ ತಮ್ಮ ಪಾಸ್‌ಪೋರ್ಟ್ ಅಳತೆಯ ಒಂದು ಭಾವಚಿತ್ರ, ವ್ಯಾಪಾರ ನಡೆಸುತ್ತಿರುವ ಒಂದು ಛಾಯಾಚಿತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಚುನಾವಣಾ ಗುರುತಿನ ಚೀಟಿ ಸೇರಿದಂತೆ ಮತ್ತಿತರ ದಾಖಲೆಗಳನ್ನು 15 ದಿನಗಳೊಳಗಾಗಿ ಪಾಲಿಕೆಯ ಡೇ-ನಲ್ಮ್ ಶಾಖೆಗೆ ಸಲ್ಲಿಸಬೇಕು ಎಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ತಿಳಿಸಿದ್ದಾರೆ.