

ತುಮಕೂರು:ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನ.5ರಂದು ಜಿಲ್ಲೆಯ 13 ಗ್ರಾಮ ಪಂಚಾಯತಿಗಳಲ್ಲಿ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಈ ಅದಾಲತ್ನಲ್ಲಿ ಪಿಂಚಣಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಕುಂದು-ಕೊರತೆ ಆಲಿಸಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಭರವಸೆ ನೀಡಿದ್ದಾರೆ.
ನವೆಂಬರ್ 5ರಂದು ಜಿಲ್ಲೆಯ ಶಿರಾ ತಾಲೂಕು ದೊಡ್ಡಬಾಣಗೆರೆ, ತುರುವೇಕೆರೆ ತಾಲೂಕು ಮಾವಿನಕೆರೆ, ತಿಪಟೂರು ತಾಲೂಕು ಬಜಗೂರು, ಮಧುಗಿರಿ ತಾಲೂಕು ಚಂದ್ರಗಿರಿ, ತುಮಕೂರು ತಾಲೂಕು ಗಳಿಗೇನಹಳ್ಳಿ ಹಾಗೂ ನಿಡುವಳಲು. ಚಿಕ್ಕನಾಯಕನಹಳ್ಳಿ ತಾಲೂಕು ಯಳನಡು ಹಾಗೂ ಬೆಳಗುಲಿ, ಕುಣಿಗಲ್ ತಾಲೂಕು ಅಮೃತೂರು ಹಾಗೂ ತರೆದಕುಪ್ಪೆ, ಕೊರಟಗೆರೆ ತಾಲೂಕು ಹಂಚಿಹಳ್ಳಿ, ಪಾವಗಡ ತಾಲೂಕು ಕೆ.ಟಿ.ಹಳ್ಳಿ, ಗುಬ್ಬಿ ತಾಲೂಕು ಹಾಗಲವಾಡಿ ಗ್ರಾಪಂ ಪಿಂಚಣಿ ಅದಾಲತ್ ನಡೆಯಲಿದೆ.