ಖಾಸಗಿ ಟುಟೋರಿಯಲ್​ಗೆ ಅನುಮತಿ ಕಡ್ಡಾಯ

class room
Published on

ತುಮಕೂರು: ದಿ ಕರ್ನಾಟಕ ಟುಟೋರಿಯಲ್​ ಇನ್ಸಿಟ್ಯೂಷನ್ಸ್​ ನಿಯಮಾವಳಿಯನ್ವಯ ಪ್ರಥಮ ಹಾಗೂ ದ್ವೀತಿಯ ಪಿಯು ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಖಾಸಗಿಯಾಗಿ ಟುಟೋರಿಯಲ್​ಗಳನ್ನು ನಡೆಸುವವರು ಕಡ್ಡಾಯವಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಅನುಮತಿ ಪಡೆಯತಕ್ಕದ್ದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ತಿಳಿಸಿದ್ದಾರೆ.

ಅನುಮತಿ ಪಡೆಯದೆ ಟುಟೋರಿಯಲ್​ಗಳನ್ನು ನಡೆಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳ ಮೇಲೆ ಕಾನೂನು ಕ್ರಮವನ್ನು ಜರುಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಗರದ ಟೌನ್​ಹಾಲ್​ ವೃತ್ತದ ಬಳಿ ಜಿಲ್ಲಾ ಕೇಂದ್ರ ಗ್ರಂಥಾಲಯ ಆವರಣದಲ್ಲಿರುವ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ಉಪನಿರ್ದೇಶಕರ ಕಚೇರಿ ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net