ರಾಜೀವ್‌ಗಾಂಧಿ ಸದ್ಭಾವನಾ ಜ್ಯೋತಿಗೆ ತುಮಕೂರಿನಲ್ಲಿ ಸ್ವಾಗತ

10inc
Published on

ತುಮಕೂರು: ತಮಿಳುನಾಡಿನ ಪೆರಂಬದೂರಿನಿಂದ ಆರಂಭವಾಗಿರುವ ರಾಜೀವ್‌ಗಾಂಧಿ ಸದ್ಭಾವನಾ ಜ್ಯೋತಿ ಗುರುವಾರ ತುಮಕೂರು ನಗರ ತಲುಪಿದ್ದು, ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಿವಕುಮಾರಸ್ವಾಮೀಜಿ ವೃದ್ದದಲ್ಲಿ ಜ್ಯೋತಿಯನ್ನು ಸ್ವಾಗತಿಸಿ, ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬರಮಾಡಿಕೊಂಡು, ನಂತರ ಬಿಳ್ಕೊಟ್ಟರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರುಳೀಧರ್ ಹಾಲಪ್ಪ, ರಾಜೀವ್‌ಗಾಂಧಿ ಜ್ಯೋತಿ ಯಾತ್ರೆ ಸಮಿತಿ ಅಧ್ಯಕ್ಷ ದೊರೈರಾಜು, ಉಪಾಧ್ಯಕ್ಷ ಗೋಮಾತೀಶನ್ ಆಯ್ಯರ್, ಕಾರ್ಯಾಧ್ಯಕ್ಷ ಶ್ರೀನಿವಾಸಪ್ಪ, ಸದಸ್ಯರಾದ ರಾಲ್ಪ್ ಮತ್ತಿತರರು ಇದ್ದರು. ಮುಖಂಡರಾದ ಇಕ್ಬಾಲ್ ಅಹ್ಮದ್, ಷಣ್ಮುಖಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net