ಪ್ರತಿದಿನ ತ್ರಿವರ್ಣಧ್ವಜ ಹಾರಿಸಬೇಕಿಲ್ಲ ಎಂದಿದ್ದ ಪಿಡಿಒ ಅಮಾನತು

14_PDO
Published on

ತುಮಕೂರು: ಗ್ರಾಪಂ ಕಚೇರಿ ಆವರಣದಲ್ಲಿ ರಜಾದಿನದಲ್ಲಿ ತ್ರಿವರ್ಣಧ್ವಜ ಹಾರಿಸದ ಬಗ್ಗೆ ಪ್ರಶ್ನಿಸಿದ ಸಾರ್ವಜನಿಕರಿಗೆ ಪ್ರತಿದಿನ ಧ್ವಜಾರೋಹಣ ಮಾಡಬೇಕಿಲ್ಲ ಎಂದು ಸಾರ್ವಜನಿಕರಿಗೆ ಉದಾಫೆ ಉತ್ತರ ನೀಡಿದ್ದ ಕೊರಟಗೆರೆ ತಾಲೂಕು ಬೂದಗವಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಜಯಕುಮಾರಿ ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಆದೇಶಿಸಿದ್ದಾರೆ.

2022 ಆ.13ರಂದು ಕೂಡ ಬೂದಗವಿ ಗ್ರಾಪಂ ಕಚೇರಿ ಮುಂದೆ ರಾತ್ರಿಯೆಲ್ಲಾ ರಾಷ್ಟçಧ್ವಜಾ ಹಾರಾಟ ಮಾಡಿದ್ದ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿ ಎಚ್ಚರಿಕೆ ನೀಡಲಾಗಿತ್ತು.

ಗ್ರಾಪಂ ವ್ಯವಹಾರಗಳಲ್ಲಿ ಸಾಕಷ್ಟು ಲೋಪಗಳ ಬಗ್ಗೆ ದೂರುಗಳೂ ಇರುವ ಹಿನ್ನೆಲೆಯಲ್ಲಿ ಆರೋಪಿತ ಅಧಿಕಾರಿಯನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ ಸಿಇಒ ಮಂಗಳವಾರ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net