ದೇಶದ ಅಭಿವೃದ್ಧಿಯಲ್ಲಿ ವಿತರಕರ ಕೊಡುಗೆ ಅಪಾರ

Patrika
Published on

ತುಮಕೂರು: ನಿಷ್ಕಲ್ಮಷವಿಲ್ಲದ ಕಾಯಕ ಯಾವುದೇ ಇರಲಿ ಹೆಮ್ಮೆಯಿಂದ ಮಾಡಿದರೆ ಸಂತೃಪ್ತ ಜೀವನ ನಡೆಸಬಹುದು, ಪತ್ರಿಕಾ ವಿತರಕರ ಕಾಯಕವೂ ಕೂಡ ಸುದ್ದಿ ಪ್ರಸಾರದ ಪ್ರಮುಖ ಕಾಯಕವಾಗಿರುವುದರಿಂದ ದೇಶದ ಅಭಿವೃದ್ಧಿಯಲ್ಲಿ ವಿತರಕರ ಕಾಯಕವೂ ಕೂಡ ಪ್ರಮುಖವಾದುದು ಎಂದು ಅರೆ ಸೇನಾಪಡೆಯ ನಿವೃತ್ತ ಯೋಧರಾದ ಡಿ ಚಂದ್ರಶೇಖರ್ ಹೇಳಿದರು


ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ತುಮಕೂರು ಜಿಲ್ಲಾ ದಿನ ಪತ್ರಿಕೆ ಹಂಚಿಕೆದಾರರ ಸಂಘ, ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಹಾಗೂ ಯು ಐ ಸೇವಾಸಿಂಧು ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ಮಾಡಿ ನಾನೂ ಕೂಡ ಪತ್ರಿಕೆ ವಿತರಣೆ ಮಾಡಿದ್ದೇನೆ, ಪತ್ರಿಕಾ ವಿತರಣೆ ಕಾಯಕ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವೀರ ಯೋಧನಿಗೆ ಸರಿ ಸಮಾನವಾದ ಕಾಯಕವಾಗಿತ್ತು ಎಂದರು


ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಟ್ರಸ್ಟಿ ಅಂಬಿಕಾ, ಪತ್ರಿಕಾ ವಿತರಕರಿಗೆ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಆರೋಗ್ಯದ ಕಾಳಜಿಗಾಗಿ ಹೆಲ್ತ್ ಕಾರ್ಡ್ ವಿತರಣೆ ಮಾಡಿದರು ಹಾಗೂ ಉಚಿತ ವೈದ್ಯಕೀಯ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳುವಂತೆ ವಿತರಕರಿಗೆ ತಿಳಿಸಿದರು.


ಈ ಸಂದರ್ಭದಲ್ಲಿ ಛಾಯಾಚಿತ್ರ ಪತ್ರಕರ್ತ ರೇಣುಕಾರಾಧ್ಯ ಹಾಗೂ ಹಿರಿಯ ವಿತರಕ ನಟರಾಜು ರವರ ಅನುಪಮ ಸೇವೆಗಾಗಿ ಸನ್ಮಾನಿಸಲಾಯಿತು

ಜಿಲ್ಲಾ ದಿನ ಪತ್ರಿಕೆ ಹಂಚಿಕೆದಾರರ ಸಂಘದ ಗೌರವಾಧ್ಯಕ್ಷ ನರಸಿಂಹಯ್ಯ, ಅಧ್ಯಕ್ಷ ಚಲುವರಾಜು, ಕಾರ್ಯದರ್ಶಿ ವಾಸುದೇವ, ನಿರ್ದೇಶಕರುಗಳಾದ ಯೋಗೀಶ್, ಪಾಂಡುರಂಗ, ಆನಂದ್ ಜೈನ್, ಗಂಗಮುತ್ತಯ್ಯ, ಭೂತಯ್ಯ ಲೋಕೇಶ್ ಭದ್ರಾಚಾರ್, ಎಟಿಎಂ ಲೋಕೇಶ್ ಹಿರಿಯ ವಿತರಕರಾದ ರುದ್ರೇಶ್, ಕ್ಯಾತಸಂದ್ರ ಕೃಷ್ಣಪ್ಪ, ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಭುಲಿಂಗ, ರಘುರಾಮ್, ನರಸಿಂಹಮೂರ್ತಿ, ಮಂಜುನಾಥ್, ವಿಜಯವಾಣಿ ಪ್ರಸರಣ ವ್ಯವಸ್ಥಾಪಕ ವೆಂಕಟೇಶ್, ಶ್ರೀರಾಮ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net