ವಿರೋಧ ಪಕ್ಷದಲ್ಲಿದ್ದರೂ ಪರಸ್ಪರರನ್ನು ಹೊಗಳಿಕೊಂಡ "ಡಾಕ್ಟರ್ಸ್"

param
Published on

ತುಮಕೂರು: ಕೊರಟಗೆರೆ ಜನರು 2013ರಲ್ಲಿ ಆಶಿರ್ವಾದ ಮಾಡಿದ್ದರೆ ಡಾ.ಜಿ.ಪರಮೇಶ್ವರ್ ರಾಜ್ಯದ ಚುಕ್ಕಾಣಿ ಹಿಡಿಯುತ್ತಿದ್ದರು, ಅವರ ಸೋಲು ಈ ಭಾಗದ ದುರಾದೃಷ್ಟವಾಗಿದ್ದು ಭವಿಷ್ಯದಲ್ಲಿ ಅವರಿಗೆ ಅವಕಾಶವಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮೆಚ್ಚುಗೆಯ ಮಾತುಗಳನ್ನಾಡಿದರು.

ನಾನು ಎಂಬಿಬಿಎಸ್ ಪದವಿ ಪಡೆಯಲು ಹಾಗೂ ಆ ನಂತರ ರಾಜಕೀಯಕ್ಕೆ ಬರಲು ಡಾ.ಜಿ.ಪರಮೇಶ್ವರ್ ಅವರ ಆಶಿರ್ವಾದ ಕಾರಣ, ಬೇರೆ ಪಕ್ಷದಲ್ಲಿದ್ದರೂ ಅವರ ಹಿತ ಬಯಸುತ್ತೇನೆ ಎಂದರು.

ಪರಮೇಶ್ವರ್ ಮಾತನಾಡುವಾಗಲೂ ಡಾ.ಕೆ.ಸುಧಾಕರ್ ಅವರನ್ನು ಹೊಗಳುವುದನ್ನು ಮರೆಯಲಿಲ್ಲ, ಕರೊನಾ ಸಂದರ್ಭದ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿ ಜನರ ಪ್ರಾಣ ಉಳಿಸಿದ ಕಾರ್ಯವನ್ನು ಸುಧಾಕರ್ ಮಾಡಿದ್ದು ಶ್ಲಾಘನೀಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net