

ತುಮಕೂರು: ನಿನ್ನೆ ನಡೆದ ಸಿಎಲ್ ಪಿ ಸಭೆಯಲ್ಲಿ ಶಾಸಕರು ಯಾವುದೇ ಅಸಮಾಧಾನ ಹೊರ ಹಾಕಿಲ್ಲ, ಕೆಲವು ಶಾಸಕರು ಸಿಎಂಗೆ ಪತ್ರ ಬರೆದು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಕೇಳಿಕೊಂಡಿದ್ದರು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಲ್ ಪಿ ಸಭೆಯಲ್ಲಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವಿಷಯದಲ್ಲಿ ಸತ್ಯಾಂಶವಿಲ್ಲ. ಹಿಂದಿನ ಶಾಸಕಾಂಗ ಪಕ್ಷದ ಸಭೆ ಅರ್ಧದಲ್ಲಿ ನಿಂತಿತ್ತು ಗುರುವಾರ ಪೂರ್ಣವಾಗಿ ಮುಂದುವರಿಯಿತು ಎಂದರು.
ಪತ್ರ ಬರೆಯೋದು ಅಷ್ಟೊಂದು ಸೂಕ್ತ ಅಲ್ಲ ಎಂದು ಸಬೆಯಲ್ಲಿ ಸಿಎಂ ಶಾಸಕರಿಗೆ ಸೂಚಿಸಿದ್ದಾರೆ, ಮೌಖಿಕವಾಗಿ ಹೇಳಿದ್ರೆ ನಾನು ಸಿಎಲïಪಿ ಕರೆಯುತ್ತಿದ್ದಾರೆ ಎಂದಿದ್ದಾರೆ, ಪತ್ರ ಬರೆದು ಸಹಿ ಅಭಿಯಾನ ಮಾಡೋ ಸಂಪ್ರದಾಯ ಬೇಡ ಎಂದು ಸಿಎಂ ತಾಕೀತು ಮಾಡಿದ್ದಾರೆ ಎಂದರು.
ನಮಗೆ ಗೊತ್ತಾಗದೇ ಪತ್ರ ಬರೆದು ತಪ್ಪು ಮಾಡಿದ್ದೇವೆ ಎಂದು ಶಾಸಕರು ಕ್ಷಮೆ ಕೇಳಿದ್ದಾರೆ, ಆದಾದ ಮೇಲೆ ಅವರ ಶಾಸಕರ ಸಮಸ್ಯೆಗಳು ಚರ್ಚೆಯಾದವು. ಸಚಿವರುಗಳು ಇನ್ನೂ ಹೆಚ್ಚಿನದಾಗಿ ಶಾಸಕರಿಗೆ ಸ್ಪಂದಿಸಬೇಕು ಎಂದು ಪ್ರಸ್ತಾಪ ಮಾಡಿದರು ಎಂದರು.
ಪ್ರತಿ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸಭೆ ಪ್ರತ್ಯೇಕ ವಾಗಿ ಕರೆಯುವ ಭರವಸೆ ಸಿಎಂ ಕೊಟ್ಟಿದ್ದಾರೆ ಎಂದ ಪರಮೇಶ್ವರ್ ಸಿಎಲ್ ಪಿ ಸಭೆಯಲ್ಲಿ ಶಾಸಕ ಬಿ.ಆರ್.ಪಾಟೀಲ್ ರಾಜೀನಾಮೆಗೆ ಮುಂದಾದರು ಎಂಬ ವಿಚಾರ ಸುಳ್ಳು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.