ಚುನಾವಣೆಯಲ್ಲಿ ನನ್ನ ವಿರುದ್ಧ ಕೆಲಸ ಮಾಡಿದವರೇ ಇಂದು ಹಾರಹಾಕಿ ಶುಭಕೋರಿದ್ದಾರೆ; ಡಾ.ಜಿ.ಪರಮೇಶ್ವರ

PPPPPPPPPPPP
Published on

ತುಮಕೂರು: ಚುನಾವಣೆಯಲ್ಲಿ ನನ್ನ ವಿರುದ್ಧ ಕೆಲಸ ಮಾಡಿದವರೇ ಇಂದು ಕೆಲಸ ಕಾರ್ಯಗಳಿಗೆ ನಿತ್ಯ ನನ್ನ ಬಳಿ ಬರುತ್ತಿದ್ದಾರೆ, ಎಲ್ಲರಿಗಿಂತ ಮೊದಲೇ ಹಾರ ಹಾಕಿ ಶುಭಕೋರಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಕೊರಟಗೆರೆ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮತ ಹಾಕದೇ ನನ್ನ ವಿರುದ್ಧ ಕೆಲಸ ಮಾಡಿದವರಿಗೂ ನಾನು ಶಾಸಕನಾಗಿರಬೇಕಿದೆ, ಚುನಾವಣೆ ನಂತರ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದರು.

ಕ್ಷೇತ್ರದಲ್ಲಿ ಆಯ್ಕೆಯಾದ ಮೇಲೆ ನಾನು ವಿಜಯೋತ್ಸವ ಮಾಡಿಲ್ಲ, ಜನ್ಮದಿನದ ಸಂದರ್ಭದಲ್ಲಿ ಕಾರ್ಯಕರ್ತರೆಲ್ಲರೂ ಗೆಲುವಿಗೆ ಕಾರಣರಾದವರನ್ನೆಲ್ಲಾ ನಾನು ಅಭಿನಂದಿಸುತ್ತೇನೆ, ಪ್ರಚಾರದ ಸಂದರ್ಭದಲ್ಲಿ ಮಾತುಕೊಟ್ಟಂತೆ ಹೆಚ್ಚು ಮತ ಬಂದಿರುವ ಬೂತ್‌ನಲ್ಲಿ ಮುಖಂಡರನ್ನು ಶೀಘ್ರದಲ್ಲಿಯೇ ಸನ್ಮಾನಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net