

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಸಿರಿಧಾನ್ಯ ಮೇಳದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ ಅವರಿಗೆ ಇಳಕಲ್ ಸೀರೆ ಕೊಡಿಸಿದರು.
ಮೇಳ ಉದ್ಘಾಟಿಸಿದ ಪರಮೇಶ್ವರ ಇಳಕಲ್ ಸೀರೆ ಅಂಗಡಿಗೆ ಬಂದು 1500ರೂ. ಬೆಲೆಯ ನೀಲಿ ಬಣ್ಣದ ಸೀರೆಯನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ಹಾಗೂ ಅಷ್ಟೇ ಬೆಲೆಯ ಪಿಂಕ್ ಬಣ್ಣದ ಮತ್ತೊಂದು ಸೀರೆಯನ್ನು ಅಶ್ವಿಜಾ ಅವರಿಗೆ ಸಂಕ್ರಾತಿ ಉಡುಗರೆಯಾಗಿ ನೀಡಿದರು.
ಅಶ್ವಿಜಾ ಅವರು ಸ್ಥಳದಲ್ಲಿರದಿದ್ದರೂ ಅವರ ಪತಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಅವರಿಂದ ಪತ್ನಿಯ ಇಷ್ಟದ ಬಣ್ಣ ತಿಳಿದು ಕೊಡಿಸಿದ್ದು ಮೇಳದಲ್ಲಿ ಗಮನ ಸೆಳೆಯಿತು.