

ತುಮಕೂರು: ಉಡುಪಿ ಹಾಸ್ಟೆಲ್ ಪ್ರಕರಣದ ಬಗ್ಗೆ ನನ್ನ ಹೇಳಿಕೆಯನ್ನೇ ಬಿಜೆಪಿಯವರು ಪ್ರಚಾರಕ್ಕೆ ಬಳಸಿದರೆ ಬಳಸಿಕೊಳ್ಳಲಿ, ನಮಗೆ ಜವಾಬ್ದಾರಿ ಇದೆ ಎಂದು ಗೃಹ ಸಚಿವ ಸ್ಪಷ್ಟನೆ ನೀಡಿದರು.
ನಗರದಲ್ಲಿ ಇಂದು ಸರ್ಕಾರ ನಡೆಸುವ ನಾವು ಇಂಥ ಘಟನೆಗಳನ್ನು ಲಘುವಾಗಿ ಸ್ವೀಕರಿಸೋದಿಲ್ಲ ಆದರೆ, ಇವರು ಬೇರೆ ಬೇರೆ ಅರ್ಥ ಕಲ್ಪಿಸೋದು ಸರಿಯಲ್ಲ. ಅವರು ಹೇಳಿದಕ್ಕೆ, ತಿರುಚಿದ ವ್ಯಾಖ್ಯಾನಕ್ಕೆ ಉತ್ತರ ಕೊಡಲು ಆಗಲ್ಲ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ವಿದೇಶ ಹೇಗೆ, ಎಲ್ಲಿ ಹೊರದೇಶಕ್ಕೆ ಹೊಗ್ತಾರೆ ಅನ್ನೋದು ನಮಗೆ ಗೊತ್ತಿಲ್ಲ, ಸರ್ಕಾರ ಅಸ್ಥಿರ ಮಾಡೋಕೆ ಯಾರಿಂದಲೂ ಆಗಲ್ಲ, ನಾವು ಸುಭದ್ರವಾಗಿದ್ದೇವೆ ಎಂದರು.