

ತುಮಕೂರು: ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಹಾಗೂ ಎಸ್.ಟಿ.ಸೋಮಶೇಖರ ಅವರ ಕ್ಷೇತ್ರದ ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆ ಸಂಬAಧ ನನ್ನ ಮನೆಗೆ ಭೇಟಿ ನೀಡಿದ್ದರು, ಈ ಸಂದರ್ಭದಲ್ಲಿ ರಾಜಕಾರಣದ ಬಗ್ಗೆ ಒಂದು ಶಬ್ಧವನ್ನೂ ಮಾತನಾಡಿಲ್ಲ ಎಂದು ಡಾ.ಜಿ.ಪರಮೇಶ್ವರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ನಾನೂ ಕೂಡ ವಿರೋಧ ಪಕ್ಷದಲ್ಲಿದ್ದಾಗ ಕ್ಷೇತ್ರದ ಕೆಲಸವೊಂದಕ್ಕೆ ಸಚಿವರಾಗಿದ್ದ ಆರ್.ಅಶೋಕ್ ಅವರ ಮನೆಗೆ ಹೋಗಿದ್ದೆ, ಕ್ಷೇತ್ರದ ಕೆಲಸ ಆಗಬೇಕೆಂದರೆ ಹೋಗಬೇಕಲ್ಲ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಪ್ರಧಾನಿ ಅಭ್ಯರ್ಥಿ ಎಂಬ ಐಎನ್‌ಡಿಐಎ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ನಾಜೂಕಾಗಿಯೇ ಪ್ರತಿಕ್ರಿಯಿಸಿದ ಪರಮೇಶ್ವರ, ಪ್ರಧಾನ ಮಂತ್ರಿ ಹುದ್ದೆ ಬಗ್ಗೆ ಮಾತನಾಡುವಷ್ಟು ಅರ್ಹತೆ ನನಗಿಲ್ಲ, ಹಾಗಾಗಿ, ಆ ಹುದ್ದೆ ಬಗ್ಗೆ ಮಾತನಾಡುವುದಿಲ್ಲ, ನಿಮ್ಮ ವೈಯಕ್ತಿಯ ಅಭಿಪ್ರಾಯವೇನು ಎಂದು ಕೇಳಿದರೂ ನಾನು ನಿಮಗೆ ಏನೊಂದನ್ನು ಹೇಳುವುದಿಲ್ಲ ಎಂದರು.