ಎಲ್ಲರೂ ಅಪೇಕ್ಷಿಸಿದರೆ ಮಧುಗಿರಿಗೆ ವಾಪಸ್​; ಡಾ.ಜಿ.ಪರಮೇಶ್ವರ

KNR_Param
Published on

ತುಮಕೂರು: ಸಾಮಾನ್ಯ ಕ್ಷೇತ್ರದಲ್ಲಿ ಸ್ಫರ್ಧೆ ಮಾಡಿ ಆಯ್ಕೆಯಾಗುವಂತೆ ಮಾಜಿ ಸಚಿವ ಕೆ.ಎನ್​.ರಾಜಣ್ಣ ಅವರು ನೀಡಿರುವ ಸಲಹೆಯನ್ನು ನಾನು ಒಪ್ಪುತ್ತೇನೆ, ಎಲ್ಲರೂ ಅಪೇಕ್ಷೆಪಟ್ಟರೆ ಮಧುಗಿರಿಗೂ ವಾಪಸಾಗುತ್ತೇನೆ, ತುಮಕೂರು ನಗರವೂ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರು ನಗರದಲ್ಲಿ ದಸರಾ ಮಾಡಿ ಸಾಕಷ್ಟು ಹೆಸರುಗಳಿಸಿದ್ದೇನೆ ಹಾಗಾಗಿ, ತುಮಕೂರು ನಗರದಲ್ಲಿಯೂ ಸ್ಫರ್ಧಿಸಬಹುದು ಎಂಬ ಹಿನ್ನೆಲೆಯಲ್ಲಿ ರಾಜಣ್ಣ ಉತ್ತಮವಾದ ಸಲಹೆ ನೀಡಿದ್ದು ಕಾಲ ಬಂದಾಗ ತೀರ್ಮಾನ ತೆಗೆದುಕೊಳ್ಳೊಣ ಎಂದರು.

ಕ್ಷೇತ್ರ ಪುನರ್​ವಿಂಗಡಣೆ ನಂತರ ನಾನು ಪ್ರತಿನಿಧಿಸುತ್ತಿದ್ದ ಮಧುಗಿರಿ ಕ್ಷೇತ್ರದಲ್ಲಿ ರಾಜಣ್ಣ ಅವಕಾಶ ಪಡೆದರು, ಈಗ ನನಗೂ ಸಾಮಾನ್ಯ ಕ್ಷೇತ್ರದಲ್ಲಿ ಸ್ಫಧಿಸುವಂತೆ ಸಲಹೆ ನೀಡಿದ್ದಾರೆ. ನಾನು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಮೀಸಲಾತಿ ಇರುವ ಕ್ಷೇತ್ರದಲ್ಲಿ ಮತ್ತೊಬ್ಬರಿಗೆ ಅವಕಾಶವಾಗಲಿದೆ ಎಂಬ ಅವರ ಸಲಹೆ ನ್ಯಾಯೋಚಿತವಾಗಿಯೇ ಇದೆ ಎಂದರು.

ಸಿದ್ದರಾಮಯ್ಯ ಅವರು ಅಹಿಂದ ಆರಂಭಿಸಿದಾಗ ಸತಿಶ್​ ಜಾರಕಿಹೊಳಿ ಅವರು ಪ್ರಮುಖ ಪಾತ್ರವಹಿಸಿದ್ದರು ಸೈದ್ಧಾಂತಿಕವಾಗಿಯೂ ಬದ್ಧತೆ ಹೊಂದಿರುವ ಕಾರಣಕ್ಕೆ ನಾಯಕತ್ವ ತೆಗೆದುಕೊಳ್ಳಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದು ನನಗೇನು ತಪು$್ಪ ಕಾಣಿಸುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಸೈದ್ಧಾಂತಿಕವಾಗಿ ಸ್ಪಷ್ಟವಾದ ನಿಲುವು ಹೊಂದಿರುವ ಸತೀಶ್​ ಜಾರಕಿಹೊಳಿ ಅವರು ಭವಿಷ್ಯದಲ್ಲಿ ಮುನ್ನೆಡೆಸುವ ಜವಬ್ಧಾರಿ ತೆಗೆದುಕೊಳ್ಳಬೇಕು ಎಂದು ಹೇಳಿರುವುದನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ ಎಂದರು.

ತುಮಕೂರಿನಲ್ಲಿ ಕಬ್ಬಡಿ ಪಂದ್ಯಾವಳಿಯ ಅತಿಥ್ಯ ವಹಿಸಿದ್ದೆವು ರಾಜ್ಯದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳಿಂದ 350ಕ್ಕೂ ಹೆಚ್ಚು ಕ್ರೀಡಾಪಟುಗಳು ಆಗಮಿಸಿದ್ದರು. ಬಹುಮಾನ ವಿತರಣೆಗೆ ನನ್ನನ್ನೇ ಆಹ್ವಾನಿಸಿದ್ದರು ಅಕ್ಕಪಕ್ಕದಲ್ಲಿ ಕುಳಿತಿದ್ದಾಗ ಜಿಲ್ಲಾಧಿಕಾರಿ, ಎಸ್​ಪಿ ಜತೆ ಯಾರು ಗೆಲ್ಲಲಿದ್ದಾರೆ ಎಂದು ಚರ್ಚೆ ಮಾಡಿದೆವು, ಕೆಲವರು ನಾನೇ ಬೆಟ್ಟಿಂಗ್​ ಮಾಡಿದೆ ಎಂದು ಹಬ್ಬಸಿದರು. ನಾನು ಕ್ರೀಡಾಪಟುವಾಗಿ ಬೆಟ್ಟಿಂಗ್​ ಆಡುತ್ತೇನೆಯೇ. ಡಾ.ಜಿ.ಪರಮೇಶ್ವರ ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net