ಅಭಿವೃದ್ಧಿ ಯೋಜನೆಗಿಂತ ಗ್ಯಾರಂಟಿಯೇ ನಮಗೆ ಆದ್ಯತೆ

G Parameshwar
Published on

ತುಮಕೂರು: ನಮ್ಮ ಸರ್ಕಾರ ಅಭಿವೃದ್ಧಿ ಕೆಲಸಕ್ಕಿಂತ ಗ್ಯಾರಂಟಿ ಜಾರಿಗೆ ನಮ್ಮ ಮೊದಲ ಅದ್ಯತೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.

ಚುನಾವಣೆ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿರುವ ಗ್ಯಾರಂಟಿ ಕಾರ್ಯಕ್ರಮಗಳ ಪೂರೈಕೆಯೇ ನಮ್ಮ ಸರ್ಕಾರದ ಮೊದಲ ಆದ್ಯತೆ ಹಾಗಾಗಿ, ಈ ಬಾರಿಯ ಬಜೆಟï‌ನಲ್ಲಿ ಅಭಿವೃದ್ಧಿ ಕೆಲಸಕ್ಕೆ ಹಣ ಮೀಸಲಿಡಲಾಗಿಲ್ಲ ಎಂದರು.

ನಮ್ಮ ಗ್ಯಾರಂಟಿ ಅನುಷ್ಠಾನ ಮಾಡಲು 52 ಸಾವಿರ ಕೋಟಿ ರೂ. ಬೇಕಾಗುತ್ತದೆ, ಈಗ ನಾವು ಮಂಡಿಸಿದ ಬಜೆಟï ಗ್ಯಾರಂಟಿಗೆ ಖರ್ಚಾಗುವ ಹಣ ಹೊಂದಿಸಲು ಅಭಿವೃದ್ಧಿಯ ಹೊಸ ಕಾಮಗಾರಿಗೆ ಹಣ ಕೊಡಲು ಆಗಲಿಲ್ಲ, ಹಳೇ ಕಾಮಗಾರಿಗೆ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net