ಆಸ್ತಿ ತೆರಿಗೆ, ನೀರಿನ ತೆರಿಗೆ, ಯುಜಿಡಿ ತೆರಿಗೆ ಬಗ್ಗೆ ಪಾಲಿಕೆ ಮಹತ್ವದ ಸೂಚನೆ

TUMKUR-PALIKE
Published on

ತುಮಕೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿ, ಕಟ್ಟಡ ಮಾಲೀಕರು ಹಾಗೂ ವಾಣಿಜ್ಯ ವಹಿವಾಟುದಾರರು ಆಸ್ತಿ ತೆರಿಗೆ, ನೀರಿನ ತೆರಿಗೆ, ಯುಜಿಡಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ಶುಲ್ಕ ಪಾವತಿಸಲು ಜ.31ರ ವರೆಗೂ ಅವಕಾಶವಿದೆ.

ಅಕ್ರಮ ನೀರಿನ ಸಂಪರ್ಕ ಮತ್ತು ಅಕ್ರಮ ಯುಜಿಡಿ ಸಂಪರ್ಕ ಹೊಂದಿರುವವರು ಸಂಪರ್ಕಗಳನ್ನು ಸಕ್ರಮ ಮಾಡಿಕೊಳ್ಳಲು ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ.

ಸರ್ಕಾರದಿಂದ ಶೇ.100 ರಷ್ಟು ಆಸ್ತಿ ತೆರಿಗೆ ಸಂಗ್ರಹಣೆಯ ಗುರಿ ತಲುಪಲು ಸೂಚಿಸಿರುವ ಕಾರಣ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಆಂದೋಲನÀ ಆಯೋಜಿಸಿ ಅಧಿಕಾರಿ, ನೌಕರರನ್ನು ಒಳಗೊಂಡ ತಂಡಗಳನ್ನು ರಚಿಸಿ, ಮನೆ, ಅಂಗಡಿ, ಉದ್ದಿಮೆಗಳ ಬಳಿ ಆಸ್ತಿ ತೆರಿಗೆ, ನೀರಿನ ಶುಲ್ಕ, ಯುಜಿಡಿ ಶುಲ್ಕ ಹಾಗೂ ಉದ್ದಿಮೆ ಪರವಾನಗಿ ಶುಲ್ಕ ವಸೂಲಾತಿ ಮಾಡಲು ಗುರಿ ನೀಡಲಾಗಿದೆ.

ಸದರಿ ತಂಡಗಳ ಬಳಿ ನೇರವಾಗಿ ಅಥವಾ ನಗದು ಪಾವತಿ ಕೌಂಟರ್‌ಗಳು, ಪಾಲಿಕೆ ವೆಬ್‌ಸೈಟ್ ವಿಳಾಸ www.tumakurucitycorp.org, ಕರ್ನಾಟಕಒನ್ ಕೇಂದ್ರಗಳ ಮೂಲಕ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ, ನೀರಿನ ತೆರಿಗೆ, ಯುಜಿಡಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ಶುಲ್ಕ ಪಾವತಿಸಲು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net