

ತುಮಕೂರು: ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ 2019ನೇ ಬ್ಯಾಚ್ ಐಎಎಸ್ ಅಧಿಕಾರಿ ಬಿ.ವಿ.ಅಶ್ವಿಜಾ ಅವರನ್ನು ನೇಮಿಸಿ ಸರ್ಕಾರ ಮಂಗಳವಾರ ಆದೇಶಿಸಿದೆ.
ಸಾಮಾಜಿಕ ಭದ್ರತೆ, ಪಿಂಚಣಿ ಹಾಗೂ ಕಂದಾಯ ಇಲಾಖೆ ನಿರ್ದೇಶಕ ಹುದ್ದೆಯಲ್ಲಿರುವ ಅಶ್ವಿಜಾ ಅವರನ್ನು ಖಾಲಿ ಇದ್ದ ಆಯುಕ್ತರ ಹುದ್ದೆಗೆ ನೇಮಿಸಲಾಗಿದೆ. ತುಮಕೂರು ಮಹಾನಗರ ಪಾಲಿಕೆಯಲ್ಲಿ ಐಎಎಸ್ ಅಧಿಕಾರಿಯನ್ನು ಆಯುಕ್ತರಾಗಿ ನೇಮಿಸಬೇಕು ಎಂದು ನಾಗರೀಕರು ಕೂಡ ಒತ್ತಾಯಿಸಿದ್ದರು.