

ತುಮಕೂರು: ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವ ಬಡತನ ರೇಖೆಗಿಂತ ಕೆಳಗಿರುವ ನಿರುದ್ಯೋಗಿ ಅಭ್ಯರ್ಥಿಗಳಿಂದ ಡೇನಲ್ಮ್ ಅಭಿಯಾನದ ಸ್ವಯಂ ಉದ್ಯೋಗ ಕಾರ್ಯಕ್ರಮ, ವೈಯಕ್ತಿಕ ಮತ್ತು ಗುಂಪು ಚಟುವಟಿಕೆ ಕಾರ್ಯಕ್ರಮದಡಿ ಭೌತಿಕ ಮತ್ತು ಆರ್ಥಿಕ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಮಹಾನಗರಪಾಲಿಕೆ ಡೇ-ನಲ್ಮ್ ಶಾಖೆಯಿಂದ ಉಚಿತವಾಗಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಪ್ರತಿ, ಚುನಾವಣಾ ಗುರುತಿನ ಚೀಟಿ, ಜಾತಿ ಮತ್ತು ವಾರ್ಷಿಕ ವರಮಾನ ಪ್ರಮಾಣ ಪತ್ರ, ಆಹಾರ ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಇತ್ತೀಚಿನ ಎರಡು ಭಾವಚಿತ್ರ ಲಗತ್ತಿಸಿ ಸಲ್ಲಿಸಬೇಕು ಎಂದು ಪಾಲಿಕೆ ಆಯುಕ್ತೆ ಅಶ್ವಿಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.