ನಿವೃತ್ತ ಸೈನಿಕರಿಗೆ ಸಾವಯವ ಕೃಷಿ ತರಬೇತಿ

Soldiers Killed
Published on

ತುಮಕೂರು: ತಿಪಟೂರು ತಾಲ್ಲೂಕು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕೃಷಿಯಲ್ಲಿ ತೊಡಗಿರುವ ನಿವೃತ್ತ ಸೈನಿಕರಿಗೆ 2 ದಿನದ ಸಾವಯವ ಕೃಷಿ ಹಾಗೂ ಸಾವಯವ ಕೃಷಿ ಪರಿಕರಗಳ ತಯಾರಿಕೆ(ಪಂಚಗವ್ಯ, ಜೀವಾಮೃತ, ಎರೆಹುಳು ಗೊಬ್ಬರ ತಯಾರಿಕೆ, ಜೈವಿಕ ಪೀಡೆನಾಶಕ ಹಾಗೂ ಜೈವಿಕ ಗೊಬ್ಬರ) ಕುರಿತು ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ಅಕ್ಟೋಬರ್​ ಮೊದಲನೇ ವಾರದಲ್ಲಿ ಹಮ್ಮಿಕೊಳ್ಳಲಾಗಿದೆ.

ತರಬೇತಿಯು ತಿಪಟೂರು ತಾಲ್ಲೂಕು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದ್ದು ಆಸಕ್ತರರು ಸೆಪ್ಟೆಂಬರ್​ 25ರೊಳಗೆ ಕೆ.ವಿ.ಕೆ. ವಿಜ್ಞಾನಿಗಳಿಗೆ ದೂರವಾಣಿ ಕರೆ 7259200919 ಮಾಡಿ ನೋಂದಾಯಿಸಿಕೊಳ್ಳಬಹುದು. ತರಬೇತಿ ಸಂದರ್ಭದಲ್ಲಿ ಕೇಂದ್ರದ ವತಿಯಿಂದ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net