ಹಾಸ್ಟೆಲ್​ ಪ್ರವೇಶಕ್ಕೆ ಆನ್​ಲೈನ್​ ಅರ್ಜಿ

Kavital Kasturaba Gandhi Girls Hostel
ಪಾಮನಕಲ್ಲೂರಿನಲ್ಲಿ ನಿರ್ಮಿಸಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಸತಿನಿಲಯ ಕಟ್ಟಡದ ಹೊರನೋಟ.
Published on

ತುಮಕೂರು: ಹಿಂದುಳಿದ ವರ್ಗರ್ಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಮೆಟ್ರಿಕ್​ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಜೂನ್​ 16ರೊಳಗಾಗಿ ಜಾಲತಾಣ: https://shp.karnataka.gov.in/bcwd ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಆಯಾ ತಾಲ್ಲೂಕು ಹಿಂದುಳಿದ ವರ್ಗರ್ಗಳ ಕಲ್ಯಾಣಾಧಿಕಾರಿ ಜೂನ್​ 20ರಂದು ಪರಿಶೀಲಿಸಲಿದ್ದಾರೆ. ತಾಲ್ಲೂಕು ಸಮಿತಿ ಮೂಲಕ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಆಯ್ಕೆಯಾದ ಹೊಸ ವಿದ್ಯಾರ್ಥಿಗಳ ಪಟ್ಟಿಯನ್ನು ಜೂ.23ರಂದು ಪ್ರಕಟಿಸಲಿದ್ದು ಆಯ್ಕೆಯಾದ ವಿದ್ಯಾರ್ಥಿಗಳು ಜೂ.30ರೊಳಗೆ ಪ್ರವೇಶ ಪಡೆಯಬಹುದು.

ಸಲ್ಲಿಸಬೇಕಾದ ದಾಖಲೆಗಳ ವಿವರ, ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಾಲತಾಣ https://bcwd.karnataka.gov.in ಸಂಪರ್ಕಿಸಿ. ಮಾಹಿತಿಗೆ ಮೊ.8050770004, 8050770005 ಸಂಪರ್ಕಿಸಿ.

**************

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net