ಆನ್​ಲೈನ್​ ಮೋಸಜಾಲದಲ್ಲಿ ಒಂದೇ ಗ್ರಾಮದ 500 ಜನ

online froud
ಆನ್‌ಲೈನ್‌ ವಂಚನೆ
Published on

ತುಮಕೂರು: ವಾಟ್ಸ್​ಆಪ್​ ಗ್ರೂಪ್​ನಲ್ಲಿ ಬಂದ ಆ್ಯಪ್​ ಡೌನ್​ಲೌಡ್​ ಮಾಡಿಕೊಂಡ 500ಕ್ಕೂ ಹೆಚ್ಚು ಜನರಿಂದ 5ಕೋಟಿಗೂ ಹೆಚ್ಚಿನ ಹಣ ವಂಚನೆಗೊಳಗಾಗಿರುವ ಟನೆ ಗುಬ್ಬಿ ತಾಲೂಕಿನ ಕಲ್ಲೂರಿನಲ್ಲಿ ವರದಿಯಾಗಿದ್ದು ಸಿ.ಎಸ್​.ಪುರದಲ್ಲಿ 40ಕ್ಕೂ ಹೆಚ್ಚು ಜನರು ದೂರು ದಾಖಲಿಸಿದ್ದಾರೆ.

300 ರೂ. ನಿಂದ ಹಿಡಿದು 4 ಲಕ್ಷ ರೂ. ವರೆಗೂ ಹಣ ಕಳೆದುಕೊಂಡಿರುವುದು ತಿಳಿದಿದೆ. ಕಲ್ಲೂರು ನಿವಾಸಿಗಳಿರುವ ಎರಡು ವಾಟ್ಸ್​ ಆಪ್​ ಗ್ರೂಪ್​ನಲ್ಲಿ 1400 ಜನರಿದ್ದು, ಅವರೆಲ್ಲರೂ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು ವಂಚನೆಗೆ ಒಳಗಾಗಿದ್ದಾರೆ ಎನ್ನಲಾಗಿದ್ದು ಹಣಕಳೆದುಕೊಂಡವರು ಒಬ್ಬಬ್ಬರಾಗಿಯೇ ಪೊಲೀಸರ ಮೊರೆ ಹೋಗಲಾರಂಭಿಸಿದ್ದಾರೆ.

"ಡಾಟಾಮಿರ್​ ಎಐ' ಎಂಬ ಆ್ಯಪ್​ ಮೂಲಕ ಆನ್​ಲೈನ್​ ವಂಚಕರು ಕೋಟ್ಯಾಂತರ ರೂ. ವಂಚಿಸಿದ್ದಾರೆ. ಹಣ ಹೂಡಿ ದುಪ್ಪಟ್ಟು ಹಣ ಮರಳಿ ನೀಡುವ ಆಮಿಷವೊಡ್ಡಿ ಜನರನ್ನು ವ್ಯವಸ್ಥಿತವಾಗಿ ವಂಚಿಸಲಾಗಿದ್ದು ಜಾಲ ರಾಜ್ಯವ್ಯಾಪಿಯಾಗಿರುವ ಸಾಧ್ಯತೆಯಿದೆ. ಜನರಲ್ಲಿ ನಂಬಿಕೆ ಮೂಡಿಸಲು ಆರಂಭದಲ್ಲಿ ಕಡಿಮೆ ಬಂಡವಾಳ ಹೂಡಿದವರಿ ದುಪ್ಪಟ್ಟು ಹಣ ಹಿಂತಿರಿಗಿಸಿದ್ದಾರೆ.

ನಂತರ ಒಂದಿಷ್ಟು ಸ್ಥಳಿಯರಿಗೆ ವ್ಯವಸ್ಥಾಪಕ ಹುದ್ದೆ ನೀಡಿ, ಬೆಂಗಳೂರಲ್ಲಿ ಸಭೆ ಕೂಡ ಮಾಡಿ 50000ರೂನಿಂದ 1 ಲಕ್ಷ ರೂ.ವರೆಗೆ ಸಂಬಳ ನಿಗದಿಪಡಿಸಿದ್ದಾರೆ. ಇದರಿಂದ ಉಳಿದವರು ಕೂಡ ನಂಬಿ ಹಣ ಹಾಕಿದ್ದಾರೆ. ಜೂನ್​ 19ರಂದು ಹಾಕಿದ ಹಣ ವಾಪಸ್​ ಬರದೇ ಇದ್ದಾಗ ವಂಚನೆಗೆ ಒಳಗಾಗಿದ್ದೇವೆಂದು ಮನವರಿಕೆಯಾಗಿದೆ. ಶುಕ್ರವಾರ ಸಿ.ಎಸ್​.ಪುರ ಠಾಣೆಗೆ ಸುಮಾರು 40 ಮಂದಿ ದೂರು ನೀಡಿದ್ದಾರೆ.

ಮೋಸದ ಮೂಲ ಮುನಿರಾಜು: ಮೂರು ತಿಂಗಳ ಹಿಂದೆ ಸ್ವಗ್ರಾಮಕ್ಕೆ ಬೆಂಗಳೂರಿನಿಂದ ಬಂದಿದ್ದ ಮುನಿರಾಜು ಎಂಬುವವರು ಮೊದಲು ಆ್ಯಪ್​ ಲಿಂಕ್​ ಶೇರ್​ ಮಾಡಿದ್ದಾರೆ. 300 ರೂ. ಹೂಡಿಕೆ ಮಾಡಿದವರಿಗೆ ಆರಂಭದಲ್ಲಿ 30 ರೂ. ಬಂದಿದೆ. ಹಂತ ಹಂತವಾಗಿ ಸಾವಿರದಿಂದ ಲಕ್ಷದವರೆಗೂ ಹಣ ಸುರಿದಿದ್ದಾರೆ.

ಏನಿದು ವಂಚನೆ ಪ್ರಕರಣ?


ಡಾಟಾ ಮೀರ್​ ಆ್ಯಪ್​ ಡೌನ್ಲೋಡ್​ ಮಾಡಿಕೊಂಡು ಕನಿಷ್ಠ 300 ರೂ. ಹಣ ಹೂಡಿದಾಗ 30 ರೂ. ತಕ್ಷಣವೇ ಖಾತೆಗೆ ಬಂದಿದೆ. ಅಲ್ಲದೆ ಲಿಂಕ್​ ಕಳಿಸಿ ಆ್ಯಪ್​ ಡೌನ್​ಲೋಡ್​ಗೆ ಶಿಾರಸ್ಸು ಮಾಡಿದರೆ 46 ರೂ. ಹಣ ಕೂಡ ನೀಡಿದ್ದಾರೆ. 14000 ರೂ. ಹಾಕಿದರೆ 40 ದಿನಗಳ ಕಾಲ ನಿತ್ಯ 560 ರೂಪಾಯಿ ಬಳಿಕ ಹೂಡಿಕೆ ಮೊತ್ತ 14000 ವಾಪಸ್​ ಕೊಡುವ ಆರ್​ ಸಿಕ್ಕಿದೆ.

12,000 ರೂ ಹಣ ಹಾಕಿದವರಿಗೆ 15 ದಿನ ನಿತ್ಯ 540 ರೂ, ನಂತರ 1 ತಿಂಗಳು ನಿತ್ಯ 1060 ರೂ, ಆ 1 ತಿಂಗಳ ಬಳಿಕ ಹೂಡಿದ್ದ 12,000ರೂ ವಾಪಸ್​ ಕೊಡುವ ಆರ್​ ಕೊಟ್ಟಿದ್ದಾರೆ.

12,000 ರೂ ಹಣ ಹಾಕಿದವರಿಗೆ 15 ದಿನ ನಿತ್ಯ 540 ರೂ, ನಂತರ 1 ತಿಂಗಳು ನಿತ್ಯ 1060 ರೂ, ಆ 1 ತಿಂಗಳ ಬಳಿಕ ಹೂಡಿದ್ದ 12,000ರೂ ವಾಪಸ್​ ಕೊಡುವ ಆರ್​ ಕೊಟ್ಟಿದ್ದಾರೆ.

ಆನ್​ಲೈನ್​ ವಂಚನೆಯ ಬಗ್ಗೆ ಸಿ.ಎಸ್​.ಪುರ ಠಾಣೆಯಲ್ಲಿ ಈವರೆಗೂ 40 ಜನರು ದೂರು ನೀಡಲು ಬಂದಿದ್ದರು. ಮೋಸ ಹೋಗಿದ್ದವರು ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ. ಇ ಕಲ್ಲೂರು ಮಾತ್ರವಲ್ಲದೆ ರಾಜ್ಯ ಮತ್ತು ದೇಶದ ನಾನಾ ಕಡೆಗಳಲ್ಲಿ ವಂಚನೆಯ ಜಾಲ ವ್ಯಾಪಿಸಿರುವ ಸಾಧ್ಯತೆಯಿದೆ.ಶೇಖರ್​ಡಿವೈಎಸ್​ಪಿ, ಶಿರಾ ಉಪವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net