ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದ ಮಣ್ಣು ಮಾರಿಕೊಂಡ ಅಧಿಕಾರಿಗಳು

10tvk01
Published on

ತುಮಕೂರು: ತುರುವೇಕೆರೆ ತಾಲೂಕು ಕುಣಿಕೇನಹಳ್ಳಿ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದ ಆವರಣದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮಣ್ಣು ಸಾಗಾಣಿಕೆ ಬಗ್ಗೆ ಅಧಿಕಾರಿಗಳು ತಡವಾಗಿ ಎಚ್ಚೆತ್ತುಕೊಂಡಿದ್ದಾರೆ.

ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ನಂತರ ಜಾಗೃತರಾಗಿರುವ ಪಶುಸಂಗೋಪನಾ ಇಲಾಖಾ ಉಪ ನಿರ್ದೇಶಕ ಡಾ.ಜಿ.ಗಿರೀಶ್‌ಬಾಬು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಳ್ಳಿಕಾರ್ ಕೇಂದ್ರದ ಹೆಚ್ಚುವರಿ ಪ್ರಭಾರ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಡಾ.ಡಿ.ಸದಾಶಿವಮೂರ್ತಿ ಎಂಬುವವರು ಕಾಮಗಾರಿಗಳ ನೆಪದಲ್ಲಿ ಸಾವಿರಾರು ಲೋಡು ಮಣ್ಣನ್ನು ಮಾರಾಟ ಮಾಡಿರುವ ಬಗ್ಗೆ ಸ್ಥಳೀಯ ರೈತರು ಆರೋಪಿಸಿದ್ದಾರೆ ಇಲಾಖೆ ಕಾರ್ಯದರ್ಶಿಗೆ ದೂರು ನೀಡಿದ್ದರು.

ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದ ಕಾವಲï 926 ಎಕರೆ ವಿಸ್ತೀರ್ಣ ಹೊಂದಿದ್ದು 300ಕ್ಕೂ ಹೆಚ್ಚು ಹಸುಗಳನ್ನು ಸಾಕಲಾಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net