ತುಮಕೂರಿನ ನಜರಬಾದ್‌ನಲ್ಲಿ ಗೃಹಿಣಿ ಅನುಮಾನಸ್ಪದ ಸಾವು

Crime Logo
Published on

ತುಮಕೂರು: ನಗರದ ನಜರಬಾದ್‌ನಲ್ಲಿ ಗೃಹಿಣಿ ಅನುಮಾನಸ್ಪದ ಸಾವನ್ನಪ್ಪಿದ್ದು ಪತಿಯ ವಿರುದ್ಧ ಮೃತ ಮಹಿಳೆ ಸಂಬAಧಿಕರು ದೂರು ನೀಡಿದ್ದಾರೆ.

ಅಫೀಜಾ ಭಾನು (32) ನಿಗೂಢವಾಗಿ ಸಾವನ್ನಪ್ಪಿರುವ ಗೃಹಿಣಿ. ಆಕೆಯ ಪತಿ ಅಬ್ದುಲï ಸತ್ತಾರ್‌ಶೇಖ್ ವಿರುದ್ಧ ಮೃತಳ ಕುಟುಂಬ ಸದಸ್ಯರು ತಿಲಕ್‌ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ 12 ವರ್ಷದ ಹಿಂದೆ ವಿವಾಹವಾಗಿದ್ದ ಆಫೀಜಾಬಾನು ಹಾಗೂ ಸತ್ತಾರ್‌ಶೇಖ್ ನಜರಾಬಾದ್‌ನಲ್ಲಿ ವಾಸವಾಗಿದ್ದರು. ದಂಪತಿ ನಡುವೆ ಸಾಕಷ್ಟು ಸಲ ಜಗಳವಾಗಿದ್ದು ರಾಜಿಪಂಚಾಯ್ತಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸೋಮವಾರ ತಡರಾತ್ರಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net