ನವೋದಯ ಶಾಲೆ ಪ್ರವೇಶಕ್ಕೆ ಪರೀಕ್ಷೆ

NAVODAYA-EXM
ಜವಾಹರ ನವೋದಯ ವಿದ್ಯಾಲಯ ಪ್ರವೇಶಕ್ಕಾಗಿ ಗಂಗಾವತಿ ಗುಡ್‌ಶೆರ್ಡ್ ಹಿ.ಪ್ರಾ.ಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಮಕ್ಕಳು.
Published on

ನವೋದಯ ಶಾಲೆ ಪ್ರವೇಶಕ್ಕೆ ಪರೀಕ್ಷೆ
ತುಮಕೂರು: ಊರ್ಡಿಗೆರೆ ಗೊಲ್ಲಹಳ್ಳಿಯಲ್ಲಿರುವ ಪಿಎಂ ಶ್ರೀ ಜವಾಹರ್​ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್​ ಲೈನ್​ ಅರ್ಜಿ ಸಲ್ಲಿಕೆ ಅವಧಿ ಅಕ್ಟೋಬರ್​ 7ರ ವರೆಗೆ ವಿಸ್ತರಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು NVSHQ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ, ಹಿಂದುಳಿದ ವರ್ಗ, ಗ್ರಾಮೀಣ, ನಗರ, ವಿಕಲ ಚೇತನ, ಲಿಂಗ, ಭಾಷಾ ಮಾಧ್ಯಮ ಸೇರದಂತೆ ಮತ್ತಿತರ ವಿಷಯಗಳಲ್ಲಿ ತಿದ್ದುಪಡಿ ಮಾಡಲು ಕಡೆಯ ದಿನಾಂಕದ ನಂತರ 2 ದಿನಗಳ ಕಾಲಾವಕಾಶವಿದೆ.

ಇದಕ್ಕಾಗಿ "ತಿದ್ದುಪಡಿ ಕಿಟಕಿ' ತೆರೆದಿರುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net