ದುಡಿಯೋಣ ಬಾ ಅಭಿಯಾನ

narega
ಕಟ್‌ಬೆಲ್ತೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆದ ಕೆರೆ ಹೂಳೆತ್ತುವಿಕೆ ಕಾಮಗಾರಿ.
Published on

ತುಮಕೂರು: ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಲು ಆರಂಭಿಸಿರುವ "ದುಡಿಯೋಣ ಬಾ ಅಭಿಯಾನ' ತಾಲೂಕಿನ ಹರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ಆರಂಭವಾಯಿತು.

ತಾಪಂ ಇಒ ಹರ್ಷಕುಮಾರ್​ ಕಾರ್ಯಕ್ರಮ ಉದ್ಘಾಟಿಸಿ, ನರೇಗಾ ಯೋಜನೆಯಡಿ "ದುಡಿಯೋಣ ಬಾ ಅಭಿಯಾನ' ಆರಂಭಿಸಲಾಗಿದ್ದು ಬಡ ಕುಟುಂಬಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು, ಸ್ಥಳಿಯರಿಗೆ ಉದ್ಯೋಗ ನೀಡುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುವಂತೆ ಮಾಡುವುದು, ಗ್ರಾಮೀಣ ಭಾಗದಲ್ಲಿ ವಲಸೆ ತಪ್ಪಿಸಿ ಕೂಲಿಕಾರರಿಗೆ ಕೆಲಸ ಒದಗಿಸುವುದು ನರೇಗಾ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಗ್ರಾಮೀಣ ಜನರು ಸದ್ಬಳಕೆ ಮಾಡಿಕೊಂಡಾಗ ಮಾತ್ರ ಸರ್ಕಾರದ ಯೋಜನೆ ಯಶಸ್ವಿಯಾಗಲಿದೆ. ಈ ನಿಟ್ಟಿನಲ್ಲಿ ವೈಯಕ್ತಿಕ ಅಥವಾ ಸಾಮೂಹಿಕ ಕೂಲಿಯನ್ನು ಸೃಷ್ಟಿಸಲು ದುಡಿಯೋಣ ಬಾ ಅಭಿಯಾನ ಸಹಕಾರಿಯಾಗಿದೆ. ಹರಳೂರು ಗ್ರಾಮದ ರೈತರಿಗೆ ಉದ್ಯೋಗ ಖಾತರಿ ಯೋಜನೆಯ ಮಾಹಿತಿಯುಳ್ಳ ಕರಪತ್ರಗಳನ್ನು ಹಂಚುವ ಮೂಲಕ ಕೂಲಿ ಆಧಾರಿತ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net