

ತುಮಕೂರು: ಮಧ್ಯರಾತ್ರಿ ಕೊಟ್ಟಿಗೆಗೆ ನುಗ್ಗಿ ನಾಟಿ ಕೋಳಿ ಕದಿಯುತ್ತಿದ್ದ ಐವರು ಖದೀಮರು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಪಾವಗಡ ತಾಲೂಕಿನ ಪಿ.ರೊಪ್ಪ ಗ್ರಾಮದಲ್ಲಿ ನಡೆದಿದೆ.
ಸುಧಾ ಎಂಬುವವರಿಗೆ ಸೇರಿದ್ದ 40 ಕೋಳಿಗಳ ಪೈಕಿ 18 ಕೋಳಿಗಳನ್ನು ಎಗರಿಸಿದ್ದ ಕಳ್ಳರನ್ನು ಹಿಡಿದ ಸ್ಥಳೀಯರು. ಕಳ್ಳತನ ಸಂದರ್ಭದಲ್ಲಿ ಕೋಳಿಗಳ ಕಿರುಚಾಟ ಕೇಳಿದ ಮಾಲೀಕರು ಎದ್ದು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ನಾಲ್ವರು ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ, ಸೆರೆಯಾಗಿದ್ದ ಒಬ್ಬ ಕೂಡ ಬೆಳಗ್ಗೆ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ನೆಪಹೇಳಿ ತಪ್ಪಿಸಿಕೊಂಡಿದ್ದಾನೆ. ಕೋಳಿ ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಾವಗಡ ಠಾಣೆಯಲ್ಲಿ ಕೋಳಿಕಳ್ಳರ ವಿರುದ್ಧ ಪ್ರಕರಣ ದಾಖಲಾಗಿದೆ.