

ತುಮಕೂರು: ಹಾಸ್ಯ ಚಕ್ರವರ್ತಿ ದಿ.ನರಸಿಂಹರಾಜು ಅವರ ತವರು ತಿಪಟೂರು ನಗರದಲ್ಲಿ ನಿರ್ಮಿಸಿರುವ ರಂಗಮಂದಿರದಲ್ಲಿ ಜು.24ರಂದು ಅವರ ಜನ್ಮ ಶತಮಾನೋತ್ಸವಕ್ಕೆ ಸಿದ್ಧತೆ ನಡೆದಿದೆ.
ನಗರದ ಹಲವು ಸಂಘ, ಸಂಸ್ಥೆಗಳು ಒಟ್ಟಾಗಿ ಕಲ್ಪತರು ನಾಡಿನ ಹೆಮ್ಮೆಯ ಕಲಾವಿದನಿಗೆ ಗೌರವ ಸಲ್ಲಿಸಲು ನಿರ್ಧರಿಸಿದ್ದು 24 ಸೋಮವಾರ ಸಂಜೆ 6 ಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಡರಗಿ ಸಮಾರಂಭ ಉದ್ಘಾಟಿಸಲಿದ್ದಾರೆ.
ನರಸಿಂಹರಾಜು ಪುತ್ರಿ, ಕಲಾವಿದೆ ಸುಧಾ ನರಸಿಂಹರಾಜು, ಗಾಯಿತ್ರಿದೇವಿ ನರಸಿಂಹರಾಜು ಮತ್ತು ಮೊಮ್ಮಗ ಅವಿನಾಶ್, ದಿವಾಕರ್ ಅವರನ್ನು ಸನ್ಮಾನಿಸಲಾಗುತ್ತಿದೆ.
ತಿಪಟೂರಿನೊಂದಿಗೆ ನರಸಿಂಹರಾಜು ಸಂಬಂಧ!?
ಪೊಲೀಸ್ ಪೇದೆಯಾಗಿದ್ದ ರಾಮರಾಜು, ವೆಂಕಟಲಕ್ಷ್ಮೀ ಪುತ್ರನಾಗಿ ಜುಲೈ 24, 1923ರಂದು ನರಸಿಂಹರಾಜು ತಿಪಟೂರಿನಲ್ಲಿಯೇ ಜನಸಿದರು. ಬಾಲ್ಯವನ್ನು ಇಲ್ಲಿಯೇ ಕಳೆದಿದ್ದ ನರಸಿಂಹರಾಜು 4ನೇ ವಯಸ್ಸಿನಿಂದಲೇ ಚಂದ್ರಮೌಳೇಶ್ವರ ನಾಟಕ ಕಂಪನಿಯಲ್ಲಿ ಗೋರಕುಂಬಾರ ಮತ್ತು ಹರಿಶ್ಚಂದ್ರ ನಾಟಕಗಳ ಮೂಲಕ ನಟನೆ ಪ್ರಾರಂಬಿಸಿ, 2 ನೇ ವಯಸ್ಸಿನವರೆಗೂ ಚಂದ್ರಮೌಳೇರ‍್ವರ ನಾಟಕ ಕಂಪನಿ, ಹಿರಣ್ಯಮಿತ್ರ ಮಂಡಳಿ, ಭಾರತ ಲಲಿತಕಲಾ ಸಂಘ, ಗುಂಡಾ ಜೋಯಿಸರ ಕಂಪನಿ ಮತ್ತು ಗುಬ್ಬಿ ಚನ್ನಬಸವೇಶ್ವರ ನಾಟಕ ಕಂಪನಿಗಳಲ್ಲಿ ನಟಿಸಿ, 1954ರಲ್ಲಿ ಬೇಡರ ಕಣ್ಣಪ್ಪ ಚಲನ ಚಿತ್ರದಲ್ಲಿ ಅರ್ಚಕ ವೇಷದಾರಿಯಾಗಿ ಕನ್ನಡ ಚಲನ ಚಿತ್ರ ತಂಗಕ್ಕೆ ಪ್ರವೇಶಿಸಿದು. ನಂತರ ನಿರ್ಮಿಸಿದ್ದು ಇತಿಹಾಸ.