ಕೇಂದ್ರ ಸರ್ಕಾರದ ಬಳಿ ರಾಜ್ಯ ಸರ್ಕಾರ ಭಿಕ್ಷೆ ಬೇಡಲು ಹೋಗುತ್ತಿದೆ; ಮುನಿರತ್ನ

DKS And Munirathna
Published on

ತುಮಕೂರು: ಜನರ ತೆರಿಗೆ ಹಣವನ್ನು ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಪೋಲು ಮಾಡಿರುವ ರಾಜ್ಯ ಸರ್ಕಾರ ಪದೇಪದೇ ಕೇಂದ್ರ ಸರ್ಕಾರದ ಬಳಿ ಭಿಕ್ಷೆ ಬೇಡಲು ಹೋಗುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ತೆರಿಗೆಯಲ್ಲಿ 52 ಸಾವಿರ ಕೋಟಿ ರೂ.ಗಳನ್ನು ಗ್ಯಾರೆಂಟಿ ರೂಪದಲ್ಲಿ ಸಾರ್ವಜನಿಕರ ನೀಡಿ ಪೋಲು ಮಾಡಿ, ಅಭಿವೃದ್ಧಿಗೆ ಹಣವಿಲ್ಲ ಎಂದು ಬೊಬ್ಬೆಯೊಡೆಯುತ್ತಿದ್ದಾರೆ ಎಂದರು.

ಕಾಂಗ್ರೆಸ್‌ನವರು ಲೋಕಸಭಾ ಚುನಾವಣೆಗೋಸ್ಕರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯ ನಾಟಕ ಮಾಡುತ್ತಿದೆ. ಕೇಂದ್ರದಿAದ ಹಣ ಕೇಳುವುದು ಅಭಿವೃದ್ಧಿಗಲ್ಲ. ಹಣತಂದು ಲೋಕಸಭಾ ಚುನಾವಣೆಗೆ ಇನ್ನಷ್ಟು ಗ್ಯಾರೆಂಟಿ ಕೊಡಲಷ್ಟೇ ಎಂದರು.

ಚುನಾವಣೆ ಮುಗಿದ ಬಳಿಕ ಎಲ್ಲಾ ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸುವುದಾಗಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿಕೆ ನೀಡಿದದಾರೆ. ಈ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್ ಕೂಡ ವೇದಿಕೆಯಲ್ಲಿಯೇ ಇದ್ದರು ಹಾಗಾಗಿ, ಶಾಸಕರ ಮಾತಿಗೆ ಸುರೇಶ್ ಸಹಮತ ಕೂಡ ಇದೆ ಎಂದರು.

ಕಾಂಗ್ರೆಸ್‌ನವರಿಗೆ ಪ್ರತ್ಯೇಕ ದೇಶ ಮಾಡುವುದಕ್ಕೆ ಉತ್ತಮ ಆಲೋಚನೆ ಬಂದಿರಬೇಕು. 1947ರಲ್ಲಿ ಜಿನ್ನಾ ದೇಶ ವಿಭಜನೆ ಮಾಡಿದರು. ಈಗ ಕಾಂಗ್ರೆಸ್‌ನವರು ಪಾಕಿಸ್ತಾನದಂತೆ ಬೇರೊಂದು ದೇಶ ಮಾಡಲು ಹೊರಟಿದ್ದಾರೆ. ದೇಶದ ಅಖಂಡತೆ ಕುರಿತು ಪ್ರಮಾಣವಚನ ಸ್ವೀಕರಿಸಿ, ದೇಶವನ್ನು ಪ್ರತ್ಯೇಕ ಮಾಡಲು ಹೊರಟಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net