ರಾಜಕೀಯಕ್ಕೆ ಗುಡ್‌ಬೈ ಹೇಳಿರಬಹುದು, ನೀರಾವರಿ ವಿಷಯದಲ್ಲಿ ಹೋರಾಟ ನಿರಂತರ

GSB_PC_01
Published on

ತುಮಕೂರು: ಸಕ್ರೀಯ ರಾಜಕಾರಣದಿಂದ ನಿವೃತ್ತನಾಗಿರಬಹುದು, ಆದರೆ, ನೀರಾವರಿ ಯೋಜನೆಗಳ ಕಾರ್ಯಗತಗೊಳಿಸಲು ನನ್ನ ಹೋರಾಟ ಮುಂದುವರೆಸುವೆ ಎಂದು ಸಂಸದ ಜಿ.ಎಸ್.ಬಸವರಾಜು ಘೋಷಿಸಿದರು.

ಜಿಲ್ಲೆಯ ರಾಜಕಾರಣದಲ್ಲಿ ಕಳೆದ 6 ದಶಕಗಳು ಸಕ್ರಿಯನಾಗಿದ್ದು, ಅಭಿವೃದ್ಧಿ ವಿಚಾರದಲ್ಲಿ ನಾನೂ ಎಂದೂ ಹಿಂದೆ ಬಿದ್ದಿಲ್ಲ. 5 ಬಾರಿ ಸಂಸದನಾಗಿ ಜಿಲ್ಲೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಹೋರಾಡಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿರುವೆ. ಮುಂದೆಯೂ ರಾಜ್ಯದ ನೀರಾವರಿ ತಜ್ಞ ದಿವಂಗತ ಜಿ.ಎಸ್.ಪರಮಶಿವಯ್ಯ ಅವರು ಹಾಕಿಕೊಟ್ಟಿರುವ ಯೋಜನೆಗಳ ಅನುಷ್ಠಾನಕ್ಕೆ ಹೋರಾಡುತ್ತೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1960ರ ದಶಕದಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕನಾಗಿ ಆಯ್ಕೆಯಾಗುವುದರೊಂದಿಗೆ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ನಾನು, ಎಪಿಎಂಸಿ ಅಧ್ಯಕ್ಷನಾಗಿಯೂ ಕಾರ್ಯನಿರ್ವಹಿಸಿದ್ದೆ. 1984ರಲ್ಲಿ ಪ್ರಥಮ ಬಾರಿಗೆ ಸಂಸತ್ ಪ್ರವೇಶಿಸಿದ್ದು 5 ಬಾರಿ ಲೋಕ ಚುನಾವಣೆಯಲ್ಲಿ ಗೆದ್ದಿದ್ದೇನೆ. ಒಮ್ಮೆ ವಿಧಾನಸಭೆ, 2 ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲನ್ನು ಸಹ ಕಂಡಿದ್ದೇನೆ. ಐದು ದಶಕಗಳಿಗು ಹೆಚ್ಚು ಕಾಲದ ನನ್ನ ರಾಜಕೀಯ ಜೀವನದಲ್ಲಿ 2019ರಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ನನ್ನನ್ನು ಸಮರ್ಥ ಅಭ್ಯರ್ಥಿಯೆಂದು ಬಿಜೆಪಿ ಕಣಕ್ಕಿಳಿಸಿತ್ತು. ಕ್ಷೇತ್ರದ ಮತದಾರರು ನನ್ನನ್ನು ಗೆಲ್ಲಿಸಿದ್ದು, ಸಂಸದನಾಗಿ ಒಂದು ತಿಂಗಳು ಅವಧಿ ಮಾತ್ರ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net