ಪ್ರಚಾರಪ್ರಿಯ ನಾನಲ್ಲ ಎಂದ ಬಸವರಾಜು

GSB_PC_01
Published on

ತುಮಕೂರು: ಸಂಸತ್‌ನಲ್ಲಿ ಒಂದೆರೆಡು ಮಾತಾಡಿ ಅದನ್ನೇ ದೊಡ್ಡದಾಗಿ ಬಿಂಬಿಸಿ ಪ್ರಚಾರ ಪಡೆಯುವ ವ್ಯಕ್ತಿ ನಾನಲ್ಲ. ಅಭಿವೃದ್ಧಿ ವಿಚಾರದಲ್ಲಿ ಎಂದು ಹಿಂದೆ ಬಿದ್ದಿಲ್ಲ ಎಂದು ಸಂಸದ ಜಿ.ಎಸ್.ಬಸವರಾಜು ತಮ್ಮ ರಾಜಕೀಯ ವಿರೋಧಿಗಳಿಗೆ ತಿರುಗೇಟು ಕೊಟ್ಟರು.

ತಮ್ಮ ಜನ್ಮದಿನದ ಸಂಭ್ರಮ ಸಂದರ್ಭದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ನಾನು ಶ್ರಮಿಸಿದ ಅನೇಕ ಯೋಜನೆಗಳು ಮಂಜೂರಾಗಿದ್ದು, ಕೆಲವು ಪ್ರಸ್ತಾವನೆ ಹಂತದಲ್ಲಿದೆ.ಊರಿಗೊಂದು ಕೆರೆ ಆ ಕೆರೆಗೆ ನದಿ ನೀರು ಯೋಜನೆ ಅನುಷ್ಠಾನಕ್ಕೆ ನನ್ನ ಅಧ್ಯಕ್ಷತೆಯ ದಿಶಾ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಜಾರಿಗೊಳಿಸಬೇಕಾದ ಅಗತ್ಯವಿದೆ ಎಂದರು.

ಕಳೆದ 60 ವರ್ಷಗಳ ರಾಜಕೀಯ ಜೀವನದಲ್ಲಿ ವಿವಿಧ ಹಂತದಲ್ಲಿ ಕಾರ್ಯನಿರ್ವಹಿಸಲು ಸಹಕರಿಸಿದ ಎಲ್ಲಾ ಪಕ್ಷಗಳ ನಾಯಕರಿಗೂ ಮತದಾರರಿಗೂ ಜನತೆಗೆ, ನನ್ನ ಕುಟುಂಬದವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ. ವಿ.ಸೋಮಣ್ಣ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾಗುವುದು ನಿಶ್ಚಿತ. ಮುದ್ದಹನುಮೇಗೌಡರದ್ದು ಮಾತಾಡಿದ್ದೇ ಸಾಧನೆಯಾಗಿದೆ ಎಂದು ಟಾಂಗ್ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net