ವಿಶ್ವದಲ್ಲಿ ಭಾರತ ಬಲಿಷ್ಠವಾಗಿ ಬೆಳೆಯಲು ನರೇಂದ್ರಮೋದಿ ಅವರ ಕೊಡುಗೆ ಅಲ್ಲಗಳೆಯಲಾಗದು: ಡಾ.ಜಿ.ಪರಮೇಶ್ವರ

Param_kORATAGERE_cONGRS
Published on

ತುಮಕೂರು: ಎಲ್ಲ ಕ್ಷೇತ್ರಗಳಲ್ಲೂ ವಿಶ್ವದಲ್ಲಿ ಭಾರತ ಬಲಿಷ್ಠವಾಗಿ ಬೆಳೆಯುತ್ತಿದೆ, ಇದಕ್ಕೆ ಮೋದಿ ಅವರು ಒಂದಿಷ್ಟು ಮಾಡಿದ್ದಾರೆ ಆದರೆ, ಇದಕ್ಕೆ ಅಡಿಪಾಯ ಹಾಕಿದವರು ಯಾರು, ಅಡಿಪಾಯ ಹಾಕಿದವರನ್ನು ಸ್ಮರಿಸಬೇಕಲ್ವಾ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವ ಅಭಿಪ್ರಾಯಪಟ್ಟರು.

ಕೇಂದ್ರದಲ್ಲಿ ಯುಪಿಎ 10 ವರ್ಷಗಳ ಕಾಲ ಆಡಳಿತ ನಡೆಸಿದ್ದರು, ಆಗಲೂ ಸಹ ಜನ ಬದಲಾವಣೆ ಬಯಸಿ ನರೇಂದ್ರ ಮೋದಿ ಅವರಿಗೆ ಅಧಿಕಾರ ಕೊಟ್ಟರು. ಈಗಲೂ ಸಹ ಜನ ಬದಲಾವಣೆ ಬಯಸಿದ್ದು, ಮತ್ತೊಮ್ಮೆ ಕಾಂಗ್ರೆಸ್‌ಗೆ ಅಧಿಕಾರ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 50, 60 ಸ್ಥಾನ ಬರುತ್ತವೆ ಎಂದು ಕೆಲ ಸಮೀಕ್ಷೆಗಳು ಹೇಳಿದರೆ, ಒಂದು ಚಾನಲ್ ಮಾತ್ರ 135 ಸೀಟು ಬರುತ್ತವೆ ಎಂದು ಹೇಳಿತ್ತು. ಸಮೀಕ್ಷೆಗಳು ಉಲ್ಟಾ ಆಗುತ್ತಿರುತ್ತವೆ. ಅದಕ್ಕೆ ಅದನ್ನು ಸಮೀಕ್ಷೆ ಎಂದು ಹೇಳುತ್ತಾರೆ, ಅದನ್ನು ಫಲಿತಾಂಶ ಎಂದು ಹೇಳಲಾಗುವುದಿಲ್ಲ ಎಂದರು.

ಸಮೀಕ್ಷೆಯನ್ನು ಸಮೀಕ್ಷೆಯಾಗಿಯೇ ನೋಡಬೇಕು ಎಂದು ಲೋಕಸಭಾ ಚುನಾವಣೆ ಸಂಬAಧ ಸಮೀಕ್ಷೆಗಳು ನಡೆಯುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net