

ಗುಬ್ಬಿ: ತೋಟಗಾರಿಕೆ ಇಲಾಖೆ ವತಿಯಿಂದ ಅನುಷ್ಟಾಗೊಳಿಸಲಾಗುತ್ತಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯಡಿ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ.
ನರೇಗಾ ಯೋಜನೆಯಡಿ ತೆಂಗು, ಮಾವು, ಸಪೋಟ, ಬಾಳೆ(ಅಂಗಾಂಶ), ಪಪ್ಪಾಯ, ಸೀಬೆ, ನೇರಳೆ, ನಿಂಬೆ, ಹಲಸು, ಕಾಳು ಮೆಣಸು, ಜಾಯಿಕಾಯಿ, ಏಲಕ್ಕಿ, ಹುಣಸೆ, ಗೇರು ಬೆಳೆ, ಕೋಕೋ, ತಾಳೆ ಬೆಳೆ, ಗುಲಾಬಿ ಹಾಗೂ ಇತರೆ ಎಲ್ಲಾ ತೋಟಗಾರಿಕೆ ಬೆಳೆಗಳನ್ನು (ಅಡಕೆ ಹೊರತುಪಡಿಸಿ) ರೈತರ ಜಮೀನಿನಲ್ಲಿ ಪ್ರದೇಶ ವಿಸ್ತರಣೆ ಕೈಗೊಳ್ಳಬಹುದು.
ಅರ್ಜಿಯನ್ನು ಗುಬ್ಬಿ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ(ಜಿಪಂ) ಅಥವಾ ಸಂಬಂಧಿಸಿದ ಹೋಬಳಿ ಸಹಾಯಕ ತೋಟಗಾರಿಕೆ ಅಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು. ಮಾಹಿತಿಗೆ ರೈತ ಸಂಪರ್ಕ ಕೇಂದ್ರ ಹಾಗೂ ಹಾಗಲವಾಡಿ -ಮೊ. 9901003372; ಕಡಬ ಮತ್ತು ನಿಟ್ಟೂರು- ಮೊ.9535376687, ಚೇಳೂರು- 6362409080 ಹಾಗೂ ಸಿ.ಎಸ್.ಪುರ- 7259243329 ಸಂಪರ್ಕಿಸಿ.