ಅಮಾನಿಕೆರೆ ಕೋಡಿ ಸೇತುವೆ ಅಭಿವೃದ್ಧಿಗೆ 6.50 ಕೋಟಿ ರೂ; ಶಾಸಕ ಜ್ಯೋತಿಗಣೇಶ್ ಭರವಸೆ

IMG_3860
Published on

ತುಮಕೂರು: ಅಪಘಾತಗಳ ಸಂಖ್ಯೆ ಹೆಚ್ಚಾಗಿರುವ ನಗರದ ಶಿರಾಗೇಟ್ ರಸ್ತೆಯ ಶಂಕರ್ ಮಾಲ್ ಮುಂಭಾಗದ ಶಿಥಲವಾದ ಸೇತುವೆ ವಿಸ್ತರಣೆಗೆ 6.50 ಕೋಟಿ ರೂ. ಯೋಜನೆ ಸಿದ್ಧವಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಭರವಸೆ ನೀಡಿದ್ದಾರೆ.

ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿ, ಕೋಡಿಬಸವಣ್ಣ ದೇವಸ್ಥಾನದಿಂದ ಶಿರಾಗೇಟ್ ವರೆಗಿನ ಕಿರಿದಾಗಿರುವ ರಸ್ತೆಯನ್ನು ನಾಲ್ಕು ಪಥಗಳಿಗೆ ವಿಸ್ತರಿಸುವಾಗ ಅನುದಾನದ ಕೊರತೆಯಿಂದ ಸೇತುವೆ ಕಾಮಗಾರಿ ನೆನಗುದಿಗೆ ಬಿದ್ದಿತ್ತು ಎಂದರು.

ಶAಕರ್‌ಮಾಲ್ ಮುಂಭಾಗ ಸೇತುವೆ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆ, ಮಹಾನಗರಪಾಲಿಕೆ ಹಾಗೂ ನಗರಾಭಿವೃದ್ಧಿ ಇಲಾಖೆ ವತಿಯಿಂದ 6.50 ಕೋಟಿ ರೂ. ಯೋಜನೆ ಸಿದ್ಧವಾಗಿದೆ, ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಭೇಟಿ ನೀಡಿ ಸೂಚನೆ ನೀಡಿದ್ದರು ಎಂದರು.

ಈ ಸಂದರ್ಭದಲ್ಲಿ ಟೂಡಾ ಆಯುಕ್ತ ಶಿವಕುಮಾರ್, ಪಾಲಿಕೆ ಇಇ ಆಶಾ, ವಿನಯ್, ಸಂಚಾರಿ ವೃತ್ತ ನಿರೀಕ್ಷಕ ಗುರುನಾಥ್, ಲೋಕೋಪಯೋಗಿ ಇಲಾಖೆಯ ಎಇಇ ರವಿ, ಸಿದ್ದಪ್ಪ, ಟೂಡಾ ಎಇಇ ಶೈಲಜಾ, ಅರುಣ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net