

ತುಮಕೂರು: ವೃತ್ತಿಯಲ್ಲಿ ವೈದ್ಯರಾಗಿ, ರೋಗಿಗಳ ಆಪರೇಷನ್ ಮಾಡಿ ಸಾಕಷ್ಟು ಸಲ ಗಮನ ಸೆಳೆದಿರುವ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಬಿಳಿ ಪಂಚೆಯುಟ್ಟು ಕೆಸರು ಗದ್ದೆಯಲ್ಲಿ ಇಳಿದು ಭತ್ತ ನಾಟಿ ಮಾಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
ಭಾನುವಾರ ಕುಣಿಗಲ್ ತಾಲೂಕು ಯಡವಾಣಿ ಗ್ರಾಮದಲ್ಲಿ ರೈತ ರಾಜೇಶ್ ಅವರ ಗದ್ದೆಗೆ ಇಳಿದು ರಂಗಣಾಥ್ ಭತ್ತ ನಾಟಿ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಕ್ಕೆ ವೈರಲ್ ಆಗಿದೆ.