ವಿವೇಕಾನಂದ ಸ್ಪೋರ್ಟ್ಸ್ ಅಂಡ್ ಕಲ್ಚರ್ ಅಸೋಸಿಯೇಷನ್‌ಗೆ 20 ಪದಕ

11_Ashootr
Published on

ತುಮಕೂರು: 11ನೇ ರಾಜ್ಯ ಮಟ್ಟದ ರೈಫಲ್ ಶೂಟಿಂಗ್ ಕ್ರೀಡಾಕೂಟದಲ್ಲಿ ಇಲ್ಲಿನ ವಿವೇಕಾನಂದ ಸ್ಪೋರ್ಟ್ಸ್ ಅಂಡ್ ಕಲ್ಚರ್ ಅಸೋಸಿಯೇಷನ್‌ಗೆ 20 ಪದಕ ಲಭಿಸಿವೆ.

ಬೆಂಗಳೂರು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಶೂಟಿಂಗ್ ರೇಂಜ್ ನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ತುಮಕೂರಿನ ಶೂಟರ್‌ಗಳು 7 ಚಿನ್ನದ ಪದಕ 11 ಬೆಳ್ಳಿಪದಕ ಮೂರು ಕಂಚಿನ ಪದಕ ಸೇರಿದಂತೆ 21 ಪದಕ ಪಡೆದರು.

ರಾಜ್ಯದ ವಿವಿಧ ಕಡೆಯಿಂದ 900 ಶೂಟರ್‌ಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಿವೇಕಾನಂದ ಶೂಟಿಂಗ್ ಸಂಸ್ಥೆಯಿಂದ 48 ಕ್ರೀಡಾಪಟುಗಳು ಭಾಗವಹಿಸಿದ್ದರು. ತೇಜ್, ಟಿ.ಎಂ.ಧ್ಯಾನ್, ಕಿರಣ್ ನಂದನ, ಸಾನಿಕಾ ಸುಲ್ತಾನ, ಸಚಿನ್, ಯಶಸ್, ವಿಜೇತ ಶೆಟ್ಟಿ, ಪೂರ್ಣಚಂದ್ರ, ಪವಿತ್ರಭಟ್, ಮಹೇಶ್ ವ್ಯಯಕ್ತಿಕ ಹಾಗೂ ಮಿಕ್ಸೆಡ್ ಗುಂಪು ವಿಭಾಗದಲ್ಲಿ 21 ಪದಕ ಪಡೆದಿದ್ದಾರೆ ಹಾಗೂ 32 ಶೂಟರ್ ದಕ್ಷಿಣ ವಲಯದ ಶೂಟಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆ ಆಗಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net