

ತುಮಕೂರು: ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಫೆ.25ರ ಸಂಜೆ 5 ರಿಂದ 26ರ ಮಧ್ಯರಾತ್ರಿ 12ರ ವ್ರೆಗೆ ಮಾಂಸ ಮಾರಾಟ ನಿಷೇಧಿತ ದಿನವೆಂದು ಘೋಷಿಸಲಾಗುವುದು.ಈ ಅವಧಿಯಲ್ಲಿ ಮಾಂಸ ಮಾರಾಟ ಮಾಡುವುದು, ಸಂಗ್ರಹಣೆ ಮಾಡುವುದನ್ನು ನಿಷೇಧಿಸಲಾಗಿದ್ದು, ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆ ಹಾಗೂ ಎಲ್ಲಾ ರೀತಿಯ ಮಾಂಸ ಮಾರಾಟ ಮಳಿಗೆಗಳನ್ನು ಮುಚ್ಚತಕ್ಕದ್ದು ಎಂದು ಪಾಲಿಕೆ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.