ಪೋಲೇನಹಳ್ಳಿ ಶ್ರೀವಿವೇಕಾನಂದ ಫ್ರೌಡಶಾಲೆ ವಿದ್ಯಾರ್ಥಿಗಳಿಗೆ ಪ್ರತಿಷ್ಠಾನದ ನೆರವು

23_Madu
Published on

ತುಮಕೂರು: ಮಧುಗಿರಿ ತಾಲೂಕು ಪೋಲೇನಹಳ್ಳಿ ಶ್ರೀವಿವೇಕಾನಂದ ಗ್ರಾಮಾಂತರ ಫ್ರೌಡಶಾಲೆ ಅವರಣದಲ್ಲಿ ಪದ್ಮಜಾಪ್ರಸಾದ್ ಸ್ಮಾರಕ ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಿಗೆ ಭಾನುವಾರ ಉಚಿತ ಶಾಲಾ ಭ್ಯಾಗ್ ಮತ್ತು ನೋಟ್‌ಪುಸ್ತಕ ವಿತರಿಸಲಾಯಿತು.

ಪದ್ಮಜಾ ಪ್ರಸಾದ್ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಪ್ರಸಾದ್ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ನೈತಿಕತೆ ಮೌಲ್ಯಗಳು ಮತ್ತು ಜೀವನ ಕೌಶಲ ಹೆಚ್ಚಾಗಿರುತ್ತವೆ ಇವುಗಳ ಜತೆಗೆ ಪ್ರತಿಭೆ ಗುರುತಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ ಎಂದರು.

ಶಿಕ್ಷಣ ತಜ್ಞ ಆರ್.ಲೋಕೇಶ್, ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಅಧಿಕಾರಿ ರಾಮಚಂದ್ರಪ್ಪ, ಮುಖ್ಯ ಶಿಕ್ಷಕ ವೆಂಕಟೇಶ್, ಗ್ರಾಪಂ ಸದಸ್ಯೆ ಲಕ್ಷ್ಮಮ್ಮ, ಮಾಜಿ ಅಧ್ಯಕ್ಷ ಲಕ್ಷ್ಮಣ್, ನಿವೃತ್ತ ಶಿಕ್ಷಕ ನಾರಾಯಣಪ್ಪ, ನರಸಿಂಹಮೂರ್ತಿ, ಉಪನ್ಯಾಸಕ ಕೆ.ಎನ್.ಲಕ್ಷ್ಮೀರಂಗಯ್ಯ, ಸ್ಥಳೀಯರಾದ ಪ್ರಕಾಶ್, ಮಲ್ಲೇಶ್, ಗೋಪಾಲ್, ಶಾಂತರಾಜ್, ಲಕ್ಮೀನರಸಯ್ಯ , ಶಿವರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net