ಆಲದಮರ ಪಾರ್ಕ್ ನಲ್ಲಿ ಮಕ್ಕಳ ಓಕುಳಿ; ಕಳೆಗಟ್ಟಿದ ಬೇಸಿಗೆ ಶಿಬಿರ

Web_Art Univers
Published on

ತುಮಕೂರು: ನಗರದ ಆಲದಮರದ ಪಾರ್ಕ್ ನಲ್ಲಿ ತುಮಕೂರು ಪ್ರೆಸ್ ಕ್ಲಬ್ ಹಾಗೂ ಆರ್ಟ್ ಯೂನಿವರ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರ ಚಿಣ್ಣರು ಬಣ್ಣದ ಓಕುಳಿಯನ್ನು ಚೆಲ್ಲಿ ಶನಿವಾರ ಚಾಲನೆ ನೀಡಿದರು.

ಬದುಕಿನ ಪಯಣದಲ್ಲಿ ಬಣ್ಣದ ಪಾತ್ರ ಪ್ರಮುಖವಾದದ್ದು, ಹಾಗಾಗಿ, ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆಯನ್ನ ಶಿಬಿರದ ವಿದ್ಯಾರ್ಥಿಗಳು, ಪೋಷಕರು ಓಕುಳಿ ಆಡುವ ಮೂಲಕ ವಿಭಿನ್ನವಾಗಿ ನೆರವೇರಿಸಲಾಯಿತು.

ಫೋಷಕ ನಟ ಹನುಮಂತೇಗೌಡ ಮಾತನಾಡಿ, ಬೇಸಿಗೆ ಎಂದರೆ ನೆನಪಾಗುವುದೇ ಅಜ್ಜಿ, ತಾತನ ಮನೆ. ಈ ರೀತಿ ಬೇಸಿಗೆ ಶಿಬಿರಗಳು ನಮ್ಮ ಬಾಲ್ಯವನ್ನ ನೆನಪಿಸುತ್ತದೆ. ವಯಸ್ಸಾದಂತೆ ಮುಗ್ಧತೆಗಳನ್ನ ಕಳೆದುಕೊಳ್ಳುವ ಇಂದಿನ ದಿನಮಾನದಲ್ಲಿ ಈ ಬೇಸಿಗೆ ಶಿಬಿರಗಳು ಮಕ್ಕಳು ಹಾಗೂ ಪೋಷಕರಲ್ಲಿ ಕಲೆಯ ಮಹತ್ವವನ್ನ ಸಾರುತ್ತಿವೆ ಎಂದರು.

ನಟ ಅವಿನಾಶ್ ಶಟಮರ್ಶನ್ ಮಾತನಾಡಿದರು. ವಿದ್ಯಾರ್ಥಿಗಳಿಗಾಗಿ ರಂಗ ಕಲೆ, ರಂಗ ಗೀತೆ ನೃತ್ಯ ಇವುಗಳ ತರಬೇತಿ ನೀಡಿದರು.

ಸಾಮಾಜಿಕ ಕಾರ್ಯಕರ್ತ ನಿಸಾರ್‌ಅಹಮದ್, ಆಯೋಜಕ ಆರ್ಟ್ ಯುನಿವರ್ಸ್ ಎಚ್.ಎನ್.ಚಿದಾನಂದ, ವಿಜಯ್ ಇದ್ದರು.

ಕ್ಲೆಯï ಮಾಡಲಿಂಗ್, ಕುದುರೆ ಓಟ, ಬಾಹ್ಯಾಕಾಶ ವೀಕ್ಷಣೆ ಈ ರೀತಿಯ ಚಟುವಟಿಕೆ ಆರ್ಟ್ ಯೂನಿವರ್ಸ್ ಹಾಗೂ ಸ್ಕೈ ಆಡ್ಸ್ ಸಂಸ್ಥೆ ಬೇಸಿಗೆ ಶಿಬಿರದಲ್ಲಿ ಕೈಗೊಳ್ಳಲಿದ್ದು ಆಸಕ್ತರು ಮೊ.8217506849 ನೋಂದಾಯಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net