ಬುಲೇರೋ ವಾಹನದಲ್ಲಿ ಗುದ್ದಿ ಕೊಲೆ

MC
Published on

ಮಧುಗಿರಿ: ಗ್ರಾಮದಲ್ಲಿ ನೀರು ಸರಬರಾಜು ಮಾಡುವ ವಿಷಯದಲ್ಲಿ ಗ್ರಾಪಂ ಬಿಲ್​ ಕಲೆಕ್ಟರ್​ ರಾಮಕೃಷ್ಣ ಹಾಗೂ ಗ್ರಾಮಸ್ಥರ ನಡುವೆ ಆರಂಭವಾದ ಜಗಳ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.

ತಾಲೂಕಿನ ಪೋಲೇನಹಳ್ಳಿಯಲ್ಲಿ ಆನಂದ್​ ಕೊಲೆಯಾದವರು. ಬಿಲ್​ಕಲೆಕ್ಟರ್​ ರಾಮಕೃಷ್ಣ ಅವರ ಮಗ ನಾಗೇಶ ಪೋಲೇನಹಳ್ಳಿ ಬಸ್​ ನಿಲ್ದಾಣದಲ್ಲಿ ತನ್ನ ಬುಲೇರೋ ವಾಹನದಲ್ಲಿ ಗುದ್ದಿ ಕೊಲೆಗೈದಿದ್ದಾನೆ ಎನ್ನಲಾಗಿದ್ದು ಕೊಡಗೇನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಲೇನಹಳ್ಳಿ ಗ್ರಾಮದ ರಾಮಚಂದ್ರಪ್ಪ ಎಂಬುವವರ ಮಗ ಆನಂದ್​ ಹಾಗೂ ಗ್ರಾಪಂ ಬಿಲ್​ ಕಲೆಕ್ಟರ್​ ರಾಮಕೃಷ್ಣ ಬುಧವಾರ ಗಲಾಟೆಯಾಗಿದ್ದು ನಂತರ ಈ ಕೃತ್ಯ ನಡೆದಿದೆ. ರಾಮಕೃಷ್ಣನ ಮಗ ನಾಗೇಶ್​ ತನ್ನ ಬುಲೇರೋ ವಾಹನದಲ್ಲಿ ಅಟ್ಟಾಡಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಆನಂದ್​ ತಲೆ, ದೇಹಕ್ಕೆ ಗಂಭೀರ ಸ್ವರೂಪದ ಪೆಟ್ಟುಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net