ರೋಗಿ ಚಿಕಿತ್ಸೆಗೆ ಪಡೆದಿದ್ದ ಲಂಚ ವಾಪಸ್ ನೀಡಿ ಕ್ಷಮೆ ಕೇಳಿದ ವೈದ್ಯ, ನರ್ಸ್

MDUUUU
Published on

ಮಧುಗಿರಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ಪರೀಕ್ಷೆ ನಡೆಸಿದ್ದ ರೋಗಿಯೊಬ್ಬರಿಂದ ಕನ್ನಡಕ ನೀಡಲು ಹಣ ಪಡೆದಿದ್ದ ವೈದ್ಯ ಹಾಗೂ ಹಾಗೂ ಮತ್ತೊಂದು ಪ್ರಕರಣದಲ್ಲಿ ಹೆರಿಗೆಗಾಗಿ ಹಣ ಪಡೆದಿದ್ದ ನರ್ಸ್ರಿಂದ ಆರೋಗ್ಯಸೌಧ ಮುಖ್ಯ ಜಾಗೃತ ಕೋಶದ ಅಧಿಕಾರಿಗಳು ಹಣ ವಾಪಸ್ ಕೊಡಿಸಿದ್ದಾರೆ.

ಮಧುಗಿರಿ ಆಸ್ಪತ್ರೆಗೆ ಗುರುವಾರ ಬೆಂಗಳೂರು ಆರೋಗ್ಯ ಸೌಧ ಮುಖ್ಯ ಜಾಗೃತ ಕೋಶದ ಅಧಿಕಾರಿ ಕೆ.ಆರ್.ಶ್ರೀನಿವಾಸ್ ನೇತೃತ್ವದ ತಂಡ ನೀಡಿದ್ದ ಸಂದರ್ಭದಲ್ಲಿ ವೈದ್ಯ ಹಾಗೂ ನರ್ಸ್ ಲಂಚ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿತ್ತು.

ಕನ್ನಡಕ ನೀಡಲು ನೇತ್ರ ತಜ್ಞರೂ ಆದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಗಂಗಾಧರ್ 1500ರೂ. ಲಂಚ ಪಡೆದಿರುವ ಬಗ್ಗೆ ವಿದ್ಯಾರ್ಥಿನಿಯೊಬ್ಬರು ಅಧಿಕಾರಿಗಳ ಗಮನಕ್ಕೆ ತಂದರು. ಬಡವನಹಳ್ಳಿ ಗ್ರಾಮದ ರೋಗಿಯೊಬ್ಬರಿಂದ ಪಡೆದಿದ್ದ 3800 ರೂ. ಕೂಡ ವಾಪಸ್ ನೀಡಿ ಕ್ಷಮೆ ಕೋರಿದರು.

ತಾಲೂಕಿನ ಬ್ಯಾಲ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿದಾಗ, ವೃದ್ಧೆಯೊಬ್ಬರಿಂದ ನರ್ಸ್ ಅನುಸೂಯಮ್ಮ ಪಡೆದಿದ್ದ 5 ಸಾವಿರ ರೂ. ಲಂಚವನ್ನು ಪಾಪಸ್ ಕೊಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net